‘ಬ್ಯಾಟಿಂಗ್‌ ವೈಫಲ್ಯ ಸೋಲಿಗೆ ಕಾರಣ’

7

‘ಬ್ಯಾಟಿಂಗ್‌ ವೈಫಲ್ಯ ಸೋಲಿಗೆ ಕಾರಣ’

Published:
Updated:
‘ಬ್ಯಾಟಿಂಗ್‌ ವೈಫಲ್ಯ ಸೋಲಿಗೆ ಕಾರಣ’

ನವದೆಹಲಿ: ‘ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಕಳಪೆ ಆಟ ಆಡಿ ದ್ದರಿಂದ ಸೋಲಬೇಕಾಯಿತು’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ಕೊಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿದರು. ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧದ ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆಯನ್ನು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು 34 ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಲ್ಲಿ 128 ರನ್‌ ಗಳಿಸಿ ಸೋತಿತು.

‘ನಮ್ಮ ತಂಡದ ಬೌಲರ್‌ಗಳು ಸಾಧ್ಯವಾದಷ್ಟು ಕಡಿಮೆ ಮೊತ್ತಕ್ಕೆ ಡೆಲ್ಲಿ ತಂಡವನ್ನು ಕಟ್ಟಿಹಾಕಲು ಪ್ರಯತ್ನಿಸಿದರು. ಆದರೆ, ಕೊನೆಯ ಓವರ್‌ನಲ್ಲಿ ಡ್ವೇನ್‌ ಬ್ರಾವೊ ಅವರು 26 ರನ್‌ ಕೊಟ್ಟರು. ಕೆಲವೊಮ್ಮೆ ಹಾಗಾಗುತ್ತದೆ. ಕೊನೆಯ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ ಗಳನ್ನು ಕಟ್ಟಿಹಾಕುವುದು ಕಷ್ಟ. ಹಿಂದಿನ ಪಂದ್ಯದಲ್ಲಿ ಬ್ರಾವೊ ಅವರು ಎದುರಾಳಿ ತಂಡವನ್ನು 180 ರನ್‌ಗಳಿಗೆ ಕಟ್ಟಿಹಾಕಿದ್ದರು. ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮ ಜೊತೆಯಾಟ ಕಟ್ಟುವಲ್ಲಿ ವಿಫಲ ವಾದರು’ ಎಂದು ಫ್ಲೆಮಿಂಗ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry