7

ಹಾಕಿ ಇಂಡಿಯಾ ನೂತನ ಅಧ್ಯಕ್ಷರಾಗಿ ರಾಜೀಂದರ್‌

Published:
Updated:

ನವದೆಹಲಿ: ರಾಜೀಂದರ್‌ ಸಿಂಗ್‌ ಅವರು ಹಾಕಿ ಇಂಡಿಯಾದ (ಎಚ್‌ಐ) ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

‘ಇತ್ತೀಚೆಗಷ್ಟೇ ಎಚ್‌ಐನ ಅಧ್ಯಕ್ಷೆ ಆಗಿದ್ದ ಮರಿಯಮ್ಮ ಕೋಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಆ ಸ್ಥಾನಕ್ಕೆ ರಾಜೀಂದರ್‌ ಸಿಂಗ್‌ ಅವರನ್ನು ಶನಿವಾರದಿಂದಲೇ ಅನ್ವಯವಾಗುವಂತೆ ನೇಮಕ ಮಾಡಲು ಸಂತಸವಾಗುತ್ತಿದೆ’ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್‌ ಹೇಳಿದ್ದಾರೆ.

‘ಹಲವು ಹುದ್ದೆಗಳನ್ನು ನಿರ್ವಹಿಸಿದ ಮರಿಯಮ್ಮ ಕೋಶಿ ಅವರು ಭಾರತದ ಹಾಕಿ ಬೆಳವಣಿಗೆಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರ ಸೇವೆಯನ್ನು ಹಾಕಿ ಇಂಡಿಯಾ ಸ್ಮರಿಸುತ್ತದೆ. ಅನೇಕ ಆಡಳಿತಾಧಿಕಾರಿಗಳು ಹಾಗೂ ಆಟಗಾರರಿಗೆ ಅವರು ಸ್ಪೂರ್ತಿಯಾಗಿದ್ದರು’ ಎಂದು ಅವರು ಹೇಳಿದ್ದಾರೆ.

ರಾಜೀಂದರ್‌ ಸಿಂಗ್‌ ಅವರು ಹಾಕಿ ಇಂಡಿಯಾದ ಖಜಾಂಚಿ ಹಾಗೂ ಉಪಾಧ್ಯಕ್ಷರಾಗಿದ್ದರು. ಹಾಕಿ ಜಮ್ಮು ಮತ್ತು ಕಾಶ್ಮೀರದ ಖಜಾಂಚಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry