ಗುರುವಾರ , ಫೆಬ್ರವರಿ 25, 2021
23 °C
ಶಿಖರ್ ಧವನ್‌ ಅರ್ಧಶತಕ ವ್ಯರ್ಥ; ನಾಲ್ಕು ವಿಕೆಟ್ ಕಬಳಿಸಿದ ಪ್ರಸಿದ್ಧ ಕೃಷ್ಣ

ಪ್ಲೇ ಆಫ್‌ ‍ಪ್ರವೇಶಿಸಿದ ನೈಟ್‌ ರೈಡರ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಪ್ಲೇ ಆಫ್‌ ‍ಪ್ರವೇಶಿಸಿದ ನೈಟ್‌ ರೈಡರ್ಸ್‌

ಹೈದರಾಬಾದ್: ಪ್ರಸಿದ್ಧ ಕೃಷ್ಣ (30ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಮತ್ತು ಕ್ರಿಸ್‌ ಲಿನ್‌ (55; 43ಎ, 4ಬೌಂ, 3ಸಿ) ಗಳಿಸಿದ ಅರ್ಧ ಶತಕದ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಐಪಿಎಲ್‌ 11ನೇ ಆವೃತ್ತಿಯ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ದಿನೇಶ್‌ ಕಾರ್ತಿಕ್‌ ಬಳಗ ‘ಪ್ಲೇ ಆಫ್‌’ ಪ್ರವೇಶಿಸಿದೆ.

ಶನಿವಾರ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ 20 ಓವರ್‌ ಗಳಲ್ಲಿ 9 ವಿಕೆಟ್‌ಗೆ 172 ರನ್‌ ಗಳಿಸಿತು.ಸವಾಲಿನ ಗುರಿಯನ್ನು ಕೆಕೆಆರ್‌ 19.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಶಿಖರ್ ಧವನ್‌ (50; 39ಎ, 5ಬೌಂ, 1ಸಿ) ಮತ್ತು ಶ್ರೀವತ್ಸ ಗೋಸ್ವಾಮಿ (35; 26ಎ, 4ಬೌಂ, 1ಸಿ) ಅವರು ಸನ್‌ರೈಸರ್ಸ್‌ಗೆ ಉತ್ತಮ ಆರಂಭ ನೀಡಿದರು. ಇವರಿಬ್ಬರೂ ಸೇರಿ ಮೊದಲ ವಿಕೆಟ್‌ಗೆ 70 ರನ್‌ ಗಳಿಸಿದರು. ಒಂಬತ್ತನೇ ಓವರ್‌ನಲ್ಲಿ ಗೋಸ್ವಾಮಿ ಅವರು ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಔಟಾದರು. ನಂತರ ಕ್ರೀಸ್‌ ಗೆ ಬಂದ ನಾಯಕ ಕೇನ್ ವಿಲಿಯಮ್ಸನ್ (36;17ಎ, 1ಬೌಂ, 3ಸಿ)  ಶಿಖರ್ ಧವನ್ ಜೊತೆಗೂಡಿ ಎರಡನೇ ವಿಕೆಟ್‌ಗೆ 48 ರನ್ ಸೇರಿಸಿದರು.

ಪ್ರಸಿದ್ಧ ಕೃಷ್ಣ ಮಿಂಚು: ಬೃಹತ್ ಮೊತ್ತ ಗಳಿಸುವತ್ತ ಮುನ್ನಡೆದಿದ್ದ ಆತಿಥೇಯ ತಂಡಕ್ಕೆ ಕನ್ನಡದ ಹುಡುಗ ಪ್ರಸಿದ್ಧ ಕೃಷ್ಣ (30ಕ್ಕೆ4) ಅವರು  ಅಡ್ಡಿಯಾದರು. ಮಧ್ಯಮವೇಗಿ ಪ್ರಸಿದ್ಧ, ಶಿಖರ್ ಧವನ್,  ಮನೀಷ್ ಪಾಂಡೆ (25 ರನ್), ಶಕೀಬ್ ಅಲ್ ಹಸನ್ ಮತ್ತು ರಶೀದ್ ಖಾನ್ ಅವರ ವಿಕೆಟ್‌ಗಳನ್ನು ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಸನ್‌ರೈಸರ್ಸ್‌ ಹೈದರಾಬಾದ್‌, 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 172 (ಶಿಖರ್ ಧವನ್ 50, ಶ್ರೀವತ್ಸ ಗೋಸ್ವಾಮಿ 35, ಕೇನ್ ವಿಲಿಯಮ್ಸನ್ 36, ಮನೀಷ್ ಪಾಂಡೆ 25, ಶಕೀಬ್ ಅಲ್ ಹಸನ್ 10, ಎಂ. ಪ್ರಸಿದ್ಧಕೃಷ್ಣ 30ಕ್ಕೆ4).

ಕೆಕೆಆರ್‌: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 173 (ಲಿನ್‌ 55, ರಾಬಿನ್‌ ಉತ್ತಪ್ಪ 45). ಫಲಿತಾಂಶ: ಕೆಕೆಆರ್‌ಗೆ 5 ವಿಕೆಟ್‌ ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.