ಪದವಿ ಪರೀಕ್ಷೆ; ಕುಲಸಚಿವರ ಪರಿಶೀಲನೆ

7

ಪದವಿ ಪರೀಕ್ಷೆ; ಕುಲಸಚಿವರ ಪರಿಶೀಲನೆ

Published:
Updated:
ಪದವಿ ಪರೀಕ್ಷೆ; ಕುಲಸಚಿವರ ಪರಿಶೀಲನೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ. ಶಿವರಾಜು ಶನಿವಾರ ನಡೆದ ಪದವಿ ಪರೀಕ್ಷಾ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.

ಕೆಂಗೇರಿ ಉಪನಗರದ ಶೇಷಾದ್ರಿಪುರದ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ನಡೆದ ಬಿಸಿಎ 2ನೇ ಸೆಮಿಸ್ಟರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು.

‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈವರೆಗೆ ಯಾವ ಕುಲಸಚಿವರೂ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿರಲಿಲ್ಲ. ನಾನು ಕುಲಸಚಿವನಾದ ಮೇಲೆ ನವೆಂಬರ್‌ನಲ್ಲಿ ಇದಕ್ಕೆ ಚಾಲನೆ ನೀಡಿದೆ’ ಎಂದರು.

‘ಜೂನ್ 12ಕ್ಕೆ ಪರೀಕ್ಷೆಗಳು ಮುಗಿಯುತ್ತವೆ. ಅಲ್ಲಿಯವರೆಗೆ ಕನಿಷ್ಠ 15 ಕೇಂದ್ರಗಳಿಗೆ ಭೇಟಿ ನೀಡುವೆ. ಅಕ್ರಮಗಳು ಆಗದಂತೆ ತಡೆಯಲು ಈ ಕ್ರಮಕೈಗೊಂಡಿದ್ದೇನೆ. ರಾಮನಗರ ಜಿಲ್ಲಾ ವ್ಯಾಪ್ತಿಗೆ ಯಾರೂ ಪರಿಶೀಲನೆಗೆ ಬರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಅದನ್ನು ಸಹ ಹೋಗಲಾಡಿಸಲು ಕನಕಪುರ, ಮಾಗಡಿ, ರಾಮನಗರದ ಸುತ್ತಮುತ್ತಲಿನ ಪರೀಕ್ಷಾ ಕೇಂದ್ರಗಳಿಗೂ ಭೇಟಿ ಮಾಡುತ್ತೇನೆ’ ಎಂದು ತಿಳಿಸಿದರು.

ಜೂನ್ 16ರ ಒಳಗೆ 6ನೇ ಸೆಮಿಸ್ಟರ್‌ಗೆ ಪರೀಕ್ಷೆಗಳನ್ನು ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry