‘ಬೇಂದ್ರೆ ಅವರ ಒಂದೊಂದು ಕವನವೂ ಮಹಾಕಾವ್ಯವೇ’

7

‘ಬೇಂದ್ರೆ ಅವರ ಒಂದೊಂದು ಕವನವೂ ಮಹಾಕಾವ್ಯವೇ’

Published:
Updated:

ಬೆಳಗಾವಿ: ‘ವರಕವಿ ಬೇಂದ್ರೆಯವರು ಮಹಾಕಾವ್ಯವನ್ನು ಬರೆಯಲಿಲ್ಲ. ಆದರೆ, ಅವರು ಬರೆದ ಪ್ರತಿಯೊಂದು ಕವನವೂ ಮಹಾಕಾವ್ಯದ ಮೌಲ್ಯ ಹೊಂದಿವೆ. ಸಾಹಿತ್ಯ, ಸಂಗೀತ, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಖಗೋಳಶಾಸ್ತ್ರಗಳ ಆಳ ಅಭ್ಯಾಸದಿಂದ ಅವರಿಂದ ಇಂಥ ಕೊಡುಗೆ ಸಾಧ್ಯವಾಗಿದೆ’ ಎಂದು ಸಾಹಿತಿ ಎಲ್‌.ಎಸ್‌. ಶಾಸ್ತ್ರಿ ಹೇಳಿದರು.

ನಗರದ ವಿಶ್ವಮಾಧ್ವ ಮಹಾಪರಿಷತ್‌ನ ಬೆಳಗಾವಿ ಘಟಕದ ಉತ್ಕರ್ಷ ವಿಪ್ರ ವೇದಿಕೆ ಬಿ.ಕೆ. ಮಾಡೆಲ್ ಹೈಸ್ಕೂಲ್‌

ದಲ್ಲಿ ಅಧಿಕಮಾಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಬೇಂದ್ರೆ ದರ್ಶನ ಕುರಿತು ಮಾತನಾಡಿದರು.

’ಬೇಂದ್ರೆ ಮನೆಯ ವಾಚನಾಲಯದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, ಅವೆಲ್ಲವುಗಳನ್ನು ಓದು

ವುದಲ್ಲದೇ ಆ ಕುರಿತಂತೆ ಪುಸ್ತಕಗಳಲ್ಲಿ ಟಿಪ್ಪಣಿಯನ್ನೂ ಬರೆದಿಟ್ಟಿದ್ದಾರೆ’ ಎಂದು ಅವರು ಹೇಳಿದರು.

ದೂರದರ್ಶನ ಕಲಾವಿದ ಅನಂತ ದೇಶಪಾಂಡೆ, ’ಬೇಂದ್ರೆ ಅವರ ಜೀವನ, ಹಾಡುಗಳು, ಸಾಹಿತ್ಯ ದರ್ಶನ ಮಾಡಿದರು’.

ಗುಂಡೇನಟ್ಟಿ ಮಧುಕರ ಮಾತನಾಡಿ, ‘ಇಂಥ ವೇದಿಕೆಗಳ ಮೂಲಕ ಯುವ ಜನಕ್ಕೆ ಸಾಂಸ್ಕೃತಿಕ ಲೋಕದ ಅನುಭಾವ ಮಾಡಿಸಬೇಕಾಗಿದೆ’ ಎಂದರು.

ಶ್ರೀನಿವಾಸ ಶಿವಣಗಿ ಗಣ್ಯರನ್ನು ಸತ್ಕರಿಸಿದರು. ಅಮೋಘ ಕುಲಕರ್ಣಿ ಹಾಗೂ ಪ್ರಜಕ್ತಾ ಕುಲಕರ್ಣಿ ನಿರೂಪಿಸಿದರು. ಸಂಜೀವಿನಿ ಹುಕ್ಕೇರಿ ಪ್ರಾರ್ಥಿಸಿದರು.

ಆನಂದ ಗಲಗಲಿ, ಮದನ ಕಣಬೂರ, ಆನಂದ ಪ್ರಯಾಗ, ಎಂ.ಎ. ಪಾಟೀಲ, ಶ್ರೀವಲ್ಲಭ ಪಾಂಗ್ರಿ, ಮಾಧವ ಹುಕ್ಕೇರಿ, ಅರ್ಪಿತಾ ಪ್ರಯಾಗ, ಪ್ರಜ್ವಲ್‌ ಕುಲಕರ್ಣಿ, ಪವನ ದೇಶಪಾಂಡೆ, ರಾಘವೇಂದ್ರ ಅಧ್ಯಾಪಕ, ಅಮೋಘ ಕುಲಕರ್ಣಿ, ಪದ್ಮಿನಿ ಪಾಟೀಲ, ಅರವಿಂದ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry