ಬಿಜೆಪಿಗೆ ಸಿಗದ ಬಹುಮತ: ಕಾಂಗ್ರೆಸ್‌, ಜೆಡಿಎಸ್‌ ಸಂಭ್ರಮಾಚರಣೆ

7

ಬಿಜೆಪಿಗೆ ಸಿಗದ ಬಹುಮತ: ಕಾಂಗ್ರೆಸ್‌, ಜೆಡಿಎಸ್‌ ಸಂಭ್ರಮಾಚರಣೆ

Published:
Updated:
ಬಿಜೆಪಿಗೆ ಸಿಗದ ಬಹುಮತ: ಕಾಂಗ್ರೆಸ್‌, ಜೆಡಿಎಸ್‌ ಸಂಭ್ರಮಾಚರಣೆ

ಹರಪನಹಳ್ಳಿ: ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿ ಸಮ್ಮಿಶ್ರ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ  ಶನಿವಾರ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತಮ್ಮ ತಮ್ಮ ಪಕ್ಷದ ನಾಯಕರ ಹೆಸರಿನೊಂದಿಗೆ ಘೋಷಣೆ ಕೂಗುತ್ತಾ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ವಕೀಲ ವೆಂಕಟೇಶ್, ಅಬ್ದುಲ್ ರಹಿಮಾನ್, ಪುರಸಭೆ ಸದಸ್ಯ ಅರುಣ್ ಪೂಜಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ಶಿವಕುಮಾರ್ ನಾಯ್ಕ, ಎಸ್‌.ಸಿ ಘಟಕದ ಅಧ್ಯಕ್ಷ ಹಲಗೇರಿ ಮಂಜಪ್ಪ, ಎಂ.ಕೆ. ರಾಯಲ್ ಸಿದ್ದಿಕ್, ನಂದೀಶ್ ನಾಯ್ಕ, ಒ.ರಾಮಪ್ಪ, ಜೆಡಿಎಸ್ ಮುಖಂಡರಾದ ನೇಮ್ಯಾನಾಯ್ಕ, ಜಗದೀಶ್, ಪ್ರಸನ್ನ ಕುಮಾರ್, ಪರಶುರಾಮಪ್ಪ, ತೇಜು, ರೀಯಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry