ಮುಂಬೈ ವಿರುದ್ಧ ಟಾಸ್ ಗೆದ್ದ ಡೆಲ್ಲಿ: ಬ್ಯಾಟಿಂಗ್ ಆಯ್ಕೆ

ನವದೆಹಲಿ: ಇಲ್ಲಿನ ಫಿರೂಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
ಮುಂಬೈ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
.@DelhiDaredevils win the toss and elect to bat first against @mipaltan.#DDvMI pic.twitter.com/GdUIuMCGFG
— IndianPremierLeague (@IPL) May 20, 2018
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡವು ಸದ್ಯ ಪಾಯಿಂಟ್ ಪಟ್ಟಿಯಲ್ಲಿ 12 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ತಂಡವು ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ.
ಸನ್ರೈಸರ್ಸ್ ಹೈದರಾಬಾದ್ (18 ಅಂಕ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (16 ಅಂಕ) ಈಗಾಗಲೇ ನಾಕೌಟ್ ಹಂತ ತಲುಪಿವೆ. ಉಳಿದ ಎರಡು ಸ್ಥಾನಗಳಿಗಾಗಿ ಕೋಲ್ಕತ್ತ ನೈಟ್ರೈಡರ್ಸ್ (!4 ಪಾಯಿಂಟ್), ರಾಜಸ್ಥಾನ್ ರಾಯಲ್ಸ್, ಆರ್ಸಿಬಿ ಮತ್ತು ಮುಂಬೈ ತಂಡಗಳು ಪ್ರಯತ್ನಿಸುತ್ತಿವೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್ ಹಂತ ಪ್ರವೇಶಿಸಲು ಇನ್ನೊಂದು ಸವಾಲನ್ನು ಮೀರನಿಲ್ಲಬೇಕಿದ್ದು, ಸದ್ಯ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಸೋಲಿಸಬೇಕಿದೆ.
ಶುಕ್ರವಾರ ಡೆಲ್ಲಿ ತಂಡವು ಬಲಿಷ್ಠ ಸಿಎಸ್ಕೆ ತಂಡವನ್ನು ಸೋಲಿಸಿತ್ತು. ಪೃಥ್ವಿ ಶಾ, ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇವರು ಮುಂಬೈ ಬೌಲರ್ಗಳಾದ ಮಿಷೆಲ್ ಮೆಗ್ಲೆಂಘಾನ್, ಹಾರ್ದಿಕ್ ಪಾಂಡ್ಯ ಮತ್ತು ಮಯಂಕ್ ಮಾರ್ಕಂಡೆ ಅವರಿಗೆ ಸವಾಲೊಡ್ಡಬಲ್ಲರು. ಸೂರ್ಯ ಕುಮಾರ್ ಯಾದವ್, ಎವಿನ್ ಲೂಯಿಸ್ ಮತ್ತು ಇಶಾನ್ ಕಿಶಾನ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
Here's the Playing XI for #DDvMI.
— IndianPremierLeague (@IPL) May 20, 2018
Follow the game here - https://t.co/Ou807y8xWl pic.twitter.com/Bm8Y2BUTbs
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.