ವಾರಣಾಸಿ ಜೈಲಿನಲ್ಲಿ ಚಂದ್ರಶೇಖರ್‌ ಆಜಾದ್‌ ಪುತ್ಥಳಿ

7

ವಾರಣಾಸಿ ಜೈಲಿನಲ್ಲಿ ಚಂದ್ರಶೇಖರ್‌ ಆಜಾದ್‌ ಪುತ್ಥಳಿ

Published:
Updated:
ವಾರಣಾಸಿ ಜೈಲಿನಲ್ಲಿ ಚಂದ್ರಶೇಖರ್‌ ಆಜಾದ್‌ ಪುತ್ಥಳಿ

ವಾರಾಣಸಿ (ಉತ್ತರ ಪ್ರದೇಶ): ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳು ವಿನ್ಯಾಸಗಳಿಸಿ, ನಿರ್ಮಿಸಿರುವ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಅನಾವರಣಗೊಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ (1906-1931). ಹಲವು ಅಪರಾಧಗಳಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಸ್ವಾತಂತ್ರ್ಯ ಹೋರಾಟಗಾರನ ಪುತ್ಥಳಿ ನಿರ್ಮಿಸಿರುವುದು ವಿಶೇಷ ಎನಿಸಿದೆ.

ಈ ಪ್ರತಿಮೆಯನ್ನು ವಾರಾಣಸಿಯ ಕೇಂದ್ರ ಕಾರಾಗೃಹದ ಆವರಣದಲ್ಲಿ ನಿರ್ಮಿಸಲಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry