ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪಾಲಿಟೆಕ್ನಿಕ್‍ನ ‘ಸಿಸಿಟಿಇಕೆ’ಯಲ್ಲಿ ವೃತ್ತಿಪರ ಕೋರ್ಸ್‌ಗಳು

Last Updated 20 ಮೇ 2018, 12:06 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯದ ಹಲವು ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಸಿಸಿಟಿಇಕೆ (ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಟೆಕ್ನಿಕಲ್ ಎಜ್ಯುಕೇಶನ್ ಇನ್ ಕರ್ನಾಟಕ) ವಿಭಾಗಗಳಿವೆ. ಇಲ್ಲಿ ವಿವಿಧ ವಿದ್ಯಾರ್ಹತೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಲಿಯಬಹುದಾದ ಹಲವು ದೀರ್ಘಾವಧಿ/ಅಲ್ಪಾವಧಿಯ ಪೂರ್ಣಕಾಲಿಕ ಮತ್ತು ಅರೆಕಾಲಿಕ ವೃತ್ತಿಪರ ಕೋರ್ಸ್‌ಗಳು ಇವೆ.  ತಾಂತ್ರಿಕ, ಕಂಪ್ಯೂಟರ್, ತಾಂತ್ರಿಕೇತರ ಮತ್ತು ಬಾಲಕಿಯರಿಗಾಗಿ ವಿಶೇಷ ವಿಭಾಗಗಳಿದ್ದು, ಲಭ್ಯವಿರುವ ಕೋರ್ಸ್‌ಗಳ ವಿವರ ಮುಂದೆ ನೀಡಲಾಗಿದೆ.

ತಾಂತ್ರಿಕ ಕೋರ್ಸ್‌ಗಳು: ‘ಎಸಿ ಆಂಡ್ ರೆಫ್ರಿಜರೇಶನ್’, ‘ಎಲೆಕ್ಟ್ರಿಕ್ ವಯರಿಂಗ್ ಆಂಡ್ ಎಲೆಕ್ಟ್ರೊನಿಕ್ಸ್’, ‘ಡಿಸಿಲ್ ಮೆಕ್ಯಾನಿಕ್ ಆಂಡ್ ಆಟೊಮೊಬೈಲ್ ಸರ್ವಿಸಿಂಗ್’, ‘ಪ್ರೊಸೆಸ್ ಪೈಪಿಂಗ್ ಎಂಜಿನಿಯರಿಂಗ್’, ‘ಪ್ಲಾಂಟ್ ಡಿಸೈನ್ ಮ್ಯಾನೇಜ್‍ಮೆಂಟ್ ಸಿಸ್ಟಮ್’, ‘ಪ್ಲಂಬಿಂಗ್’, ‘ರಿವೈಂಡಿಂಗ್ ಆಫ್ ಮೋಟಾರ್ಸ್’, ‘ವೆಲ್ಡಿಂಗ್ (ಆರ್ಕ್, ವಿಂಗ್, ಟಿಗ್)’, ‘ಫೈರ್ ಆಂಡ್ ಸೇಫ್ಟಿ’, ‘ಹೆವಿ ಎಕ್ಯುಪ್ಮೆಂಟ್ ಆಪರೇಟಿಂಗ್ ಟ್ರೈನಿಂಗ್ (ಇನ್ ಜೆಸಿಬಿ, ಕ್ರೇನ್, ಫೊರ್ಕ್‍ಲೇನ್, ಫೊರ್ಕ್ ಲಿಫ್ಟ್)’ ‘ಎಲೆಕ್ಟ್ರೊನಿಕ್ ಮೆಕ್ಯಾನಿಕ್’, ‘ಮೊಬೈಲ್ ಫೋನ್ ರಿಪಾರ್ ಆಂಡ್ ಸರ್ವಿಸಿಂಗ್’, ‘ಪಿಎಲ್‍ಸಿ/ಸಿಎಲ್‍ಸಿ ಟ್ರೈನಿಂಗ್’ ಮತ್ತು ‘ಸ್ಕಿಲ್ಡ್ ಸುಪರ್‍ವೈಸರ್ ಇನ್ ಸಿವಿಲ್ ಇಂಜಿನಿಯರಿಂಗ್’ ಕೋರ್ಸ್‌ಗಳು ಈ ವಿಭಾಗದಲ್ಲಿ ಲಭ್ಯವಿದೆ.

ಕಂಪ್ಯೂಟರ್ ಕೋರ್ಸ್‌ಗಳು: ‘ಕಂಪ್ಯೂಟರ್ ಅಪ್ಲಿಕೇಶನ್ಸ್/ಮ್ಯಾನೇಜ್‍ಮೆಂಟ್’, ‘ಹಾರ್ಡ್‍ವೇರ್ ಆಂಡ್ ನೆಟ್‍ವರ್ಕಿಂಗ್’,
‘ಸಿ, ಸಿ++, ಸಿ#, .ನೆಟ್’, ‘ಬೇಸಿಕ್ ಆಂಡ್ ಅಡ್ವಾನ್ಸ್ಡ್ ಜಾವಾ ಆಂಡ್ ಜೆಎಸ್‍ಪಿ’,‘ಟ್ಯಾಲಿ ಆಂಡ್ ಪೀಚ್‍ಟ್ರೀ’, ‘ಆಟೋ
ಕ್ಯಾಡ್’, ‘ಡೆಸ್ಕ್ ಟಾಪ್ ಪಬ್ಲಿಶಿಂಗ್ (ಡಿಟಿಪಿ)’, ‘ವೆಬ್ ಡಿಸೈನಿಂಗ್’, ‘ವಿಬಿ .ನೆಟ್ ಆಂಡ್ ಎಎಸ್‍ಪಿ .ನೆಟ್’, ‘ಪಿಹೆಚ್‍ಪಿ ಆಂಡ್ ಮೈ ಎಸ್‍ಕ್ಯುಎಲ್’, ‘ಗ್ರಾಫಿಕ್ ಡಿಸೈನಿಂಗ್’ ಮತ್ತು ‘ಅನಿಮೇಶನ್’ ಕೋರ್ಸ್‍ಗಳು ಈ ವಿಭಾಗದಲ್ಲಿವೆ.

ತಾಂತ್ರಿಕೇತರ ಕೋರ್ಸ್‌ಗಳು: ‘ಲೈಟ್ ವೆಹಿಕಲ್ ಡ್ರೈವಿಂಗ್ ಟ್ರೈನಿಂಗ್’, ‘ಇಂಗ್ಲಿಷ್ ಸಪ್ಲೀಕಿಂಗ್ ಕೋರ್ಸ್’, ‘ಕರಾಟೆ ಟ್ರೈನಿಂಗ್’ ಮತ್ತು ‘ಫೈನ್ ಆಟ್ರ್ಸ್’ ಕೋರ್ಸ್‌ಗಳು ಈ ವಿಭಾಗದಲ್ಲಿ ಲಭ್ಯವಿದೆ.

ಬಾಲಕಿಯರಿಗಾಗಿ ವಿಶೇಷ ಕೋರ್ಸ್‌ಗಳು: ‘ಫ್ಯಾಶನ್ ಡಿಸೈನಿಂಗ್’, ‘ಗಾರ್ಮೆಂಟ್ ಮೇಕಿಂಗ್ ಕಟ್ಟಿಂಗ್ ಆಂಡ್ ಸ್ಟಿಚ್ಚಿಂಗ್’, ‘ಕ್ರಾಫ್ಟ್ ಆಂಡ್ ಮೆಶಿನ್ ಎಂಬ್ರೈಡರಿ’ ಮತ್ತು ‘ಹರ್ಬಲ್ ಬ್ಯೂಟೀಶಿಯನ್’ ಕೋರ್ಸ್‌ಗಳು
ಈ ವಿಭಾಗದಲ್ಲಿವೆ.

ಸೂಚನೆ: ಮೇಲೆ ತಿಳಿಸಲಾದ ಕೋರ್ಸ್‌ಗಳ ಹೊರತಾಗಿಯೂ ಅನೇಕ ಕೋರ್ಸ್‍ಗಳು ಸಿಸಿಟಿಇಕೆ ವಿಭಾಗದಲ್ಲಿವೆ ಹಾಗೂ ಮೇಲೆ ತಿಳಿಸಲಾದ ಎಲ್ಲ ಕೋರ್ಸ್‌ಗಳು ಎಲ್ಲ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಲಭ್ಯವಿರುವುದಿಲ್ಲ. ಆಯಾ ಪಾಲಿಟೆಕ್ನಿಕ್‍ನ ಸಿಸಿಟಿಇಕೆ ವಿಭಾಗವನ್ನು ಸಂಪರ್ಕಿಸಿ ಲಭ್ಯವಿರುವ ಕೋರ್ಸ್‌ಗಳ ವಿವರ ಪಡೆಯಬಹುದು.

ಸಿಸಿಟಿಇಕೆ ವಿಭಾಗಗಳಿರುವ ರಾಜ್ಯದ  ಸರ್ಕಾರಿ ಪಾಲಿಟೆಕ್ನಿಕ್‍ಗಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ಕದ್ರಿ ಹಿಲ್ಸ್‍ನಲ್ಲಿರುವ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ www.kptmng.org/cctek)  ಮತ್ತು ಮಂಗಳೂರಿನ ಬೋಂದೆಲ್‍ನಲ್ಲಿರುವ ಸರ್ಕಾರಿ  ಬಾಲಕಿಯರ ಪಾಲಿಟೆಕ್ನಿಕ್, (ವೆಬ್‍ಸೈಟ್ www.dte.karnataka.gov.in/Institutes/wptmangalore/cctek ಹಾಗೂ ಬಂಟ್ವಾಳ ತಾಲೂಕಿನ ಗಿರಿಗುಡ್ಡೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್, (ವೆಬ್‍ಸೈಟ್ www.gptbantwal.org) ಗಳಲ್ಲಿ ಸಿಸಿಟಿಇಕೆ ವಿಭಾಗಗಳಿವೆ.
ಉಳಿದಂತೆ ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ಸರಕಾರಿ ಬಾಲಕಿಯರ ಪಾಲಿಟೆಕ್ನಿಕ್,
ಜಿ.ಆರ್. ಇನ್‌ಸ್ಟಿಟ್ಯೂಟ್‌  ಆಫ್ ಕಮರ್ಶಿಯಲ್ ಪ್ರಾಕ್ಟಿಸ್, ಹಾಸನ ಜಿಲ್ಲೆಯ ಶ್ರೀಮತಿ ಎಲ್.ವಿ. ಸರ್ಕಾರಿ ಪಾಲಿಟೆಕ್ನಿಕ್, ಮೈಸೂರಿನ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್, ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಭದ್ರಾವತಿಯಲ್ಲಿರುವ ಸರ್ಕಾರಿ ವಿಐಎಸ್‍ಎಲ್ ಎಸ್.ಜೆ. ಪಾಲಿಟೆಕ್ನಿಕ್, ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿರುವ ಸರ್ಕಾರಿ ಬಾಲಕಿಯರ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಪಾಲಿಟೆಕ್ನಿಕ್, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ನಾಗಮಂಗಲ ಮತ್ತು ಕೆ.ಆರ್. ಪೇಟೆ, ಚಿಕ್ಕಬಳ್ಳಾಪುರದ ಚಿಂತಾಮಣಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ರಾಮನಗರ, ಬಳ್ಳಾರಿ ಜಿಲ್ಲೆಯ ಕುಡ್ಲಿಗಿ ಮತ್ತು ಹೊಸಪೇಟೆ ರಸ್ತೆ, ಬೀದರ್ ಜಿಲ್ಲೆಯ ಮೈಲೂರು, ಮಡಿಕೇರಿಯ ಕುಶಾಲನಗರ, ಕೋಲಾರ ಜಿಲ್ಲೆಯ ಮುಳಬಾಗಿಲು ಮತ್ತು ಬಾಗನಹಳ್ಳಿ, ದಾವಣಗೆರೆ ಜಿಲ್ಲೆಯ ಹರಿಹರ, ರಾಯಚೂರು ಜಿಲ್ಲೆಯ ಲಿಂಗಸಗೂರು, ತುಮಕೂರು ಜಿಲ್ಲೆಯ ತುರ್ವೆಕೆರೆ, ಕೊಪ್ಪಳ ಜಿಲ್ಲೆಯ ಕರಟಗಿ ಹಾಗೂ ತುಮಕೂರು, ಚಾಮರಾಜನಗರ, ಕಾರವಾರ, ವಿಜಯಪುರ, ಹೊಳೇನರಸೀಪುರ ಮತ್ತು ಚಿತ್ರದುರ್ಗದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಸಿಸಿಟಿಇಕೆ ವಿಭಾಗಗಳಿವೆ.

ಉಮರ್‌, ಯು.ಎಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT