ಆಟೊ ಚಾಲಕಿಯಾಗಿ ಸಾಯಿಪಲ್ಲವಿ!

7

ಆಟೊ ಚಾಲಕಿಯಾಗಿ ಸಾಯಿಪಲ್ಲವಿ!

Published:
Updated:
ಆಟೊ ಚಾಲಕಿಯಾಗಿ ಸಾಯಿಪಲ್ಲವಿ!

ನಟಿಸಿದ ಮೊದಲ ಚಿತ್ರಗಳಲ್ಲೇ ನಟಿ ಸಾಯಿಪಲ್ಲವಿ ತಾರಾ ವರ್ಚಸ್ಸು ಗಳಿಸಿದರು. ಪ್ರಸ್ತುತ ಅವರು, ಧುನುಷ್‌ ನಾಯಕನಟನಾಗಿ ನಟಿಸುತ್ತಿರುವ ತಮಿಳಿನ ‘ಮಾರಿ–2’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಆಟೊ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಫಿದಾ’ ಚಿತ್ರಕ್ಕಾಗಿ, ಟ್ರ್ಯಾಕ್ಟರ್ ಚಾಲನಾ ತರಬೇತಿ ಪಡೆದಿದ್ದ ಅವರು, ಈಗ ಆಟೋ ಚಾಲನಾ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಚಿತ್ರಕ್ಕೆ ಧನುಷ್‌ ಅವರೇ ಹಣ ಸುರಿಯುತ್ತಿದ್ದಾರೆ. ಖ್ಯಾತ ಮಲಯಾಳಿ ನಟ, ಟೋವಿನ್ ಥಾಮಸ್‌ ಈ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಲಿದ್ದಾರೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ.

ಈ ಚಿತ್ರಕ್ಕೆ ಯುವನ್‌ ಶಂಕರ್‌ರ ರಾಜಾ ಸಂಗೀತ ನೀಡಲಿದ್ದು, ಇಳಯರಾಜಾ ಅವರೂ ಒಂದು ಹಾಡನ್ನೂ ಕಂಪೋಸ್‌ ಮಾಡಲಿದ್ದಾರೆ. ಈ ಚಿತ್ರದ ಜತೆಗೆ ಸಾಯಿ ಪಲ್ಲವಿ ಅವರು, ಸೂರ್ಯ ನಾಯಕನಟನಾಗಿ ನಟಿಸುತ್ತಿರುವ ತಮಿಳಿನ ‘ಎನ್‌ಜಿಕೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry