ನ್ಯಾಷನಲ್‌ ಚಾಂಪಿಯನ್‌ಶಿಪ್‌ಗೆ ಮೂವರ ಆಯ್ಕೆ

7

ನ್ಯಾಷನಲ್‌ ಚಾಂಪಿಯನ್‌ಶಿಪ್‌ಗೆ ಮೂವರ ಆಯ್ಕೆ

Published:
Updated:
ನ್ಯಾಷನಲ್‌ ಚಾಂಪಿಯನ್‌ಶಿಪ್‌ಗೆ ಮೂವರ ಆಯ್ಕೆ

ಅಲ್ಲಿ ಬಣ್ಣಗಳದ್ದೇ ಮಾತು. ಬಹುಬಣ್ಣದ ಕ್ಯೂಬಿಕ್‌ಗಳನ್ನು ಹಿಡಿದಿರುವ ಸ್ಪರ್ಧಿಗಳ ಮುಖದಲ್ಲಿಯೂ ಬಣ್ಣಗಳ ಹೊಳಪು. ಚದುರಿರುವ ಬಣ್ಣಗಳನ್ನು ಒಂದೆಡೆ ಸೇರಿಸಲು ತವಕಿಸಿರುವ ಕೈಗಳು, ಮನದಲ್ಲಿಯೇ ಎಷ್ಟು ವೇಗವಾಗಿ ಒಮ್ಮುಖದಲ್ಲಿ ಒಂದೇ ಬಣ್ಣದ ಕ್ಯೂಬ್‌ಗಳನ್ನು ಜೋಡಿಸಬಹುದು ಎಂದು ಲೆಕ್ಕಾಚಾರ ಹಾಕುತ್ತಿರುವ ಸ್ಪರ್ಧಿಗಳು.

ಈ ನೋಟಕ್ಕೆ ಸಾಕ್ಷಿಯಾಗಿದ್ದು ಬಿಗ್ರೇಡ್‌ ರಸ್ತೆಯ ಡಬಲ್‌ ಡೆಕ್ಕರ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ರೆಡ್‌ ಬುಲ್ ರೂಬಿಕ್ಸ್‌ ಕ್ಯೂಬ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌’ನ ಅರ್ಹತಾ ಸುತ್ತಿನ ಸ್ಪರ್ಧೆ.

ಚಾಣಾಕ್ಷ್ಯತನದ ಆಟ ಎಂದೇ ಕರೆಸಿಕೊಳ್ಳುವ ಕ್ಯೂಬಿಕ್‌ ಆಟದ ವರ್ಲ್ಡ್‌ ಚಾಂಪಿಯನ್‌ಶಿಪ್‌ ಅಮೆರಿಕದ ಬೋಸ್ಟನ್‌ನಲ್ಲಿ ಸೆಪ್ಟೆಂಬರ್ 22 ರಂದು ನಡೆಯಲಿದೆ. ಅದಕ್ಕೆ ಪೂರ್ವಾಭಾವಿಯಾಗಿ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಬ್ರೆಜಿಲ್‌, ಜಪಾನ್‌, ಬ್ರಿಟನ್, ಭಾರತ ಸೇರಿದಂತೆ ವಿಶ್ವದ 15 ರಾಷ್ಟ್ರಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. ಅಂತಿಮ ಸುತ್ತಿನಲ್ಲಿ ಗೆದ್ದವರು ₹ 20.10 ಲಕ್ಷ (30,000 ಡಾಲರ್) ಬಹುಮಾನ ಪಡೆಯಲಿದ್ದಾರೆ.

ನಗರದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ 40 ಸ್ಪರ್ಧಿಗಳು ಭಾಗವಹಿಸಿದ್ದರು. ‘ಸ್ಪೀಡ್‌ ಕ್ಯೂಬಿಂಗ್‌’, ‘ಫಾಸ್ಟೆಸ್ಟ್‌ ಹ್ಯಾಂಡ್‌’ ಹಾಗೂ ‘ರಿ ಸ್ಕ್ರಾಂಬಲ್‌’ ಸುತ್ತಿನಲ್ಲಿ ಆಟ ನಡೆಯಿತು.

ಭಗವಾನ್‌ ಮಹಾವೀರ್ ಜೈನ್ ಕಾಲೇಜಿನ ಅನಿಕೇತ್ ಆರ್ಯ ಅವರು 56 ಸೆಕೆಂಡ್‌ಗಳಲ್ಲಿ ರೀ ಸ್ಕ್ರಾಂಬಲ್‌ ಪೂರ್ಣಗೊಳಿಸಿದರು. ರೇವಾ ಯುನಿವರ್ಸಿಟಿಯ ರೇಹಾ ರಶೀದ್‌ ಅವರು 21.14 ಸೆಕೆಂಡ್‌ಗಳಲ್ಲಿ ‘ಫಾಸ್ಟೆಸ್ಟ್‌ ಹ್ಯಾಂಡ್‌’ ಪೂರ್ಣಗೊಳಿಸಿದರು. ವಿಪ್ರೊ ಟೆಕ್ನಾಲಜೀಸ್‌ನ ಐಶ್ವರ್ಯಾ ಹೋಟಾ ಅವರು ಸ್ಪೀಡ್‌ ಕ್ಯೂಬಿಂಗ್ ಮಹಿಳಾ ವಿಭಾಗದಲ್ಲಿ ವಿಜೇತರಾದರು. ಆ ಮೂಲಕ ಮೂವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry