ರಾಯಲ್‌ ವೆಡ್ಡಿಂಗ್‌ನಲ್ಲಿ ಪ್ರಿಯಾಂಕಾ

7

ರಾಯಲ್‌ ವೆಡ್ಡಿಂಗ್‌ನಲ್ಲಿ ಪ್ರಿಯಾಂಕಾ

Published:
Updated:
ರಾಯಲ್‌ ವೆಡ್ಡಿಂಗ್‌ನಲ್ಲಿ ಪ್ರಿಯಾಂಕಾ

ಇಡೀ ಜಗತ್ತೇ ಕುತೂಹಲದಿಂದ ನೋಡುತ್ತಿದ್ದ ಬ್ರಿಟನ್‌ ರಾಜಕುಮಾರ ಫ್ರಿನ್ಸ್‌ ಹ್ಯಾರಿ ಹಾಗೂ ನಟಿ ಮೇಘನ್‌ ಮರ್ಕೆಲ್‌ ಅವರ ವಿವಾಹ ಶನಿವಾರ ಅದ್ದೂರಿಯಾಗಿ ನಡೆಯಿತು. ಇದರಲ್ಲಿ ಬಾಲಿವುಡ್‌ ನಟಿ, ಕ್ವಾಂಟಿಕೋ ತಾರೆ ಪ್ರಿಯಾಂಕಾ ಚೋಪ್ರಾ ತಿಳಿ ನೇರಳೆ ಬಣ್ಣದ ವೆಸ್ಟ್‌ವುಡ್‌ ಸೂಟ್‌ ಹಾಗೂ ಅದೇ ಬಣ್ಣದ ಹೂವಿನ ಚಿತ್ತಾರವುಳ್ಳ ಟೊಪ್ಪಿ ತೊಟ್ಟು ಭಾಗವಹಿಸಿದ್ದರು.

ಪ್ರಿಯಾಂಕಾ ಚೋಪ್ರಾ ಅವರು ನಟಿ ಮೇಘನಾ ಮರ್ಕೆಲ್‌ ಅವರ ಆಪ್ತ ಸ್ನೇಹಿತೆಯರಲ್ಲಿ ಒಬ್ಬರು. ಸಂಜೆ ನಡೆದ ಮದುವೆ ರಿಸೆಪ್ಷನ್‌ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಆಫ್‌ಶೋಲ್ಡರ್‌ ಡ್ರೆಸ್‌ನಲ್ಲಿ ಮಿಂಚಿದರು. ಮದುವೆಯ ಆಪ್ತ ಕ್ಷಣಗಳ ಫೋಟೊಗಳನ್ನು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಮದುಮಕ್ಕಳಿಗೆ ಶುಭ ಹಾರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry