ಕಾಂಗ್ರೆಸ್‌ ಪ್ರಚೋದಿತ ಉಗ್ರಗಾಮಿಗಳ ಆಕ್ರಮಣ

7

ಕಾಂಗ್ರೆಸ್‌ ಪ್ರಚೋದಿತ ಉಗ್ರಗಾಮಿಗಳ ಆಕ್ರಮಣ

Published:
Updated:
ಕಾಂಗ್ರೆಸ್‌ ಪ್ರಚೋದಿತ ಉಗ್ರಗಾಮಿಗಳ ಆಕ್ರಮಣ

ಪುತ್ತೂರು: ‘ಪ್ರಭು ಶ್ರೀರಾಮಚಂದ್ರನ ವಿರುದ್ಧ ಘೋಷಣೆ ಕೂಗುವ ಮೂಲಕ ವಿಟ್ಲ ಪರಿಸರದಲ್ಲಿ ದಾಂದಲೆ ನಡೆಸಿದ ದುಷ್ಕರ್ಮಿಗಳು ತಾವು ದೇಶದ್ರೋಹಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಆರ್‌ಎಸ್‌ಎಸ್‌ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

‌ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಿಜೆಪಿ ಕಾರ್ಯ

ಕರ್ತರನ್ನು ಭಾನುವಾರ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಿದ್ದ ಬೆನ್ನಲ್ಲೇ ರಾತೋರಾತ್ರಿ ಹಿಂದೂಗಳ ಮೇಲೆ ಕಾಂಗ್ರೆಸ್ ಪ್ರಚೋದಿತ ಉಗ್ರಗಾಮಿಗಳಿಂದ ಆಕ್ರಮಣ ಆರಂಭವಾಗಿದೆ. ವಿಟ್ಲ ಪರಿಸರದಲ್ಲಿ ಹಿಂದೂಗಳ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಭಯದ ವಾತಾವರಣ ಸೃಷ್ಟಿಸಲಾಗಿದೆ. ಕಾಂಗ್ರೆಸ್ ಪ್ರೇರಿತ ಮತೀಯವಾದಿಗಳು ಯೋಜನಾಬದ್ಧವಾಗಿ ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹಿಂದೂ ಸಮಾಜ ಎದ್ದು ನಿಂತು ಉತ್ತರಿಸಿದರೆ ಎದುರಿಸುವ ಶಕ್ತಿ ಯಾರಿಗೂ ಇರುವುದಿಲ್ಲ ಎಂಬುದನ್ನು ಈ ಮತೀಯವಾದಿಗಳು ತಿಳಿದು

ಕೊಳ್ಳಬೇಕು’ ಎಂದು ಎಚ್ಚರಿಸಿದ ಅವರು, ಹಲ್ಲೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದರು.

ಬಳೆ ತೊಟ್ಟಿಲ್ಲ: ಸಂಸದ ನಳಿನ್‌ ಕುಮಾರ್ ಕಟೀಲ್‌ ಮಾತನಾಡಿ, ‘ಕಾಂಗ್ರೆಸ್‌ ಪ್ರಾಯೋಜಿತ ದ್ವೇಷದ ರಾಜಕಾರಣಕ್ಕೆ ಉತ್ತರ ಕೊಡಬಲ್ಲೆವು; ನಾವೇನೂ ಬಳೆ ತೊಟ್ಟಿಲ್ಲ’ ಎಂದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿ ರಾಜಕಾರಣ ಆರಂಭವಾಗಿದೆ. ಸೋಲಿನ ಹತಾಶ ಭಾವನೆಯಿಂದ ಹಿಂದೂ ಸಮಾಜವನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಹಲ್ಲೆ ನಡೆಸುವ ದ್ವೇಷದ ರಾಜಕಾರಣ ಆರಂಭಗೊಂಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry