ಶ್ರೀಕಾಂತ್‌ಗೆ ಬ್ಯಾಟ್‌ ಉಡುಗೊರೆ ನೀಡಿದ ಮಹೇಂದ್ರ ಸಿಂಗ್‌ ದೋನಿ

7

ಶ್ರೀಕಾಂತ್‌ಗೆ ಬ್ಯಾಟ್‌ ಉಡುಗೊರೆ ನೀಡಿದ ಮಹೇಂದ್ರ ಸಿಂಗ್‌ ದೋನಿ

Published:
Updated:
ಶ್ರೀಕಾಂತ್‌ಗೆ ಬ್ಯಾಟ್‌ ಉಡುಗೊರೆ ನೀಡಿದ ಮಹೇಂದ್ರ ಸಿಂಗ್‌ ದೋನಿ

ನವದೆಹಲಿ: ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಅವರು ಸಹಿ ಮಾಡಿದ ಬ್ಯಾಟ್‌ ಅನ್ನು ಬಿಸಿಸಿಐನ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಅವರು ಬ್ಯಾಡ್ಮಿಂಟನ್‌ ಆಟಗಾರ ಕಿದಂಬಿ ಶ್ರೀಕಾಂತ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಹೈದರಾಬಾದ್‌ನಲ್ಲಿರುವ ಪುಲ್ಲೇಲ ಗೋಪಿಚಂದ್‌ ಅವರ ಅಕಾಡೆಮಿಗೆ ತೆರಳಿದ ಪ್ರಸಾದ್‌ ಅವರು ಶ್ರೀಕಾಂತ್‌ ಅವರಿಗೆ ಈ ಬ್ಯಾಟ್‌ ನೀಡಿದ್ದಾರೆ.

‘ಶ್ರೀಕಾಂತ್‌ ಅವರು ದೋನಿ ಅಭಿಮಾನಿ. ಒಂದು ದಿನ ನನ್ನನ್ನು ಭೇಟಿ ಮಾಡಿದ್ದ ಶ್ರೀಕಾಂತ್ ಅವರು ದೋನಿಯಿಂದ ಉಡುಗೊರೆ ಪಡೆಯುವ ಆಸೆ ಇದೆ ಎಂದು ಹೇಳಿದ್ದರು. ಆಗ, ಬ್ಯಾಡ್ಮಿಂಟನ್‌ನಲ್ಲಿ ಅಮೋಘ ಸಾಧನೆ ಮಾಡಿದರೆ ಮಾತ್ರ ನಿಮ್ಮ ಆಸೆಯನ್ನು ಪೂರೈಸುತ್ತೇನೆ ಎಂದು ಅವರಿಗೆ ಹೇಳಿದ್ದೆ’ ಎಂದು ತಿಳಿಸಿದ್ದಾರೆ.

‘ಶ್ರೀಕಾಂತ್‌ ಅವರ ಆಸೆಯ ಬಗ್ಗೆ ದೋನಿ ಅವರಿಗೆ ಹೇಳಿದೆ. ಆಗ ದೋನಿ ತಮ್ಮ ಸಹಿ ಇರುವ ಬ್ಯಾಟ್‌ ಆನ್ನು ಶ್ರೀಕಾಂತ್‌ ಗೆ ನೀಡಲು ಸಂತಸದಿಂದ ಒಪ್ಪಿದ್ದರು’ ಎಂದು ಪ್ರಸಾದ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry