30:30 ಅಧಿಕಾರ ಹಂಚಿಕೆ ಇಲ್ಲ : ಕುಮಾರಸ್ವಾಮಿ

7

30:30 ಅಧಿಕಾರ ಹಂಚಿಕೆ ಇಲ್ಲ : ಕುಮಾರಸ್ವಾಮಿ

Published:
Updated:
30:30 ಅಧಿಕಾರ ಹಂಚಿಕೆ ಇಲ್ಲ : ಕುಮಾರಸ್ವಾಮಿ

ಬೆಂಗಳೂರು: ‘ಜೆಡಿಎಸ್–ಕಾಂಗ್ರೆಸ್‌ ತಲಾ 30 ತಿಂಗಳ ಅಧಿಕಾರ ನಡೆಸುತ್ತವೆ’ ಎಂಬ ವರದಿಗಳನ್ನು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಳ್ಳಿ ಹಾಕಿದ್ದಾರೆ.

‘ಬಿಜೆಪಿ ಜೊತೆ ಈ ಹಿಂದೆ 20 ತಿಂಗಳ ಸರ್ಕಾರ ಹಂಚಿಕೆ ಒಪ್ಪಂದ ಮಾಡಿಕೊಂಡಂತೆ ಈಗಲೂ ನೀವು ಕಾಂಗ್ರೆಸ್ ಜೊತೆ ತಲಾ 30 ತಿಂಗಳ ಅಧಿಕಾರ ಹಂಚಿಕೆ ಮಾಡಿಕೊಂಡು ಸರ್ಕಾರ ನಡೆಸುತ್ತೀರಾ’ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ರಾಜರಾಜೇಶ್ವರಿ ನಗರ ಹಾಗೂ ಜಯನಗರ ಕ್ಷೇತ್ರಗಳ ವಿಧಾನಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿದ್ದೀರಂತೆ, ಹೌದೇ ಎಂಬ ಪ್ರಶ್ನೆಗೆ, ‘ಇದೆಲ್ಲಾ ಬೋಗಸ್ ಸುದ್ದಿ. ಅಂತಹ ಯಾವುದೇ ಚರ್ಚೆ ನಡೆದಿಲ್ಲ’ ಎಂದರು.

ಅವರೇ ಬಂದು ನೋಡಲಿ: ‘ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಬೇಕು’ ಎಂಬ ರಜನಿಕಾಂತ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ರಜನಿಕಾಂತ್‌ ಕರ್ನಾಟಕಕ್ಕೆ ಬಂದು ಇಲ್ಲಿನ ಆಣೆಕಟ್ಟುಗಳನ್ನು ಖುದ್ದು ನೋಡಿದರೆ ನಮ್ಮ ರೈತರ ಸಂಕಷ್ಟ ಏನೆಂಬುದು ಗೊತ್ತಾಗುತ್ತದೆ. ಆಗಲೂ ನೀರು ಬೇಕು ಎಂದು ಕೇಳಿದರೆ ಕುಳಿತು ಚರ್ಚಿಸಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry