7

ನರ್ಮದಾ ಮಾನವನ ಪಳೆಯುಳಿಕೆ ಸಂಶೋಧಕ ಅಪಘಾತದಲ್ಲಿ ಸಾವು

Published:
Updated:

ನವದೆಹಲಿ: ಭಾರತದ ಏಕೈಕ ಪ್ರಾಚೀನ ‘ನರ್ಮದಾ ಮಾನವ’ನ ಪಳೆಯುಳಿಕೆ ಪತ್ತೆ ಮಾಡಿದ್ದ ಅರುಣ್ ಸೋಂಕಿಯಾ ಭಾನುವಾರ ಮಧ್ಯಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಭಾರತೀಯ ಸರ್ವೇಕ್ಷಣಾ ಇಲಾಖೆಯ ಉದ್ಯೋಗಿಯಾಗಿದ್ದ ಅವರು, 1982ರಲ್ಲಿ ನರ್ಮದಾ ನದಿ ದಂಡೆ ಬಳಿ ಉತ್ಖನನದ ವೇಳೆ ಪ್ರಾಚೀನ ಮಾನವನ ಬುರುಡೆಯೊಂದನ್ನುಪತ್ತೆ ಮಾಡಿದ್ದರು. ಅದು ಮಾನವನ ಪೂರ್ವಜ ಹೋಮೊ ಎರೆಕ್ಟಸ್‌ನ ತಲೆಬುರುಡೆಯಾಗಿತ್ತು.

ದಕ್ಷಿಣ ಏಷ್ಯಾದಲ್ಲಿ ಪತ್ತೆಯಾದ ಮೊದಲ ಮತ್ತು ಏಕೈಕ ಪಳೆಯುಳಿಕೆ ಅದು. ಆವರೆಗೆ ಯುರೋಪ್, ಆಫ್ರಿಕಾಗಳಲ್ಲಿ ಮಾತ್ರ ಅಂತಹ ಪಳೆಯುಳಿಕೆ ಪತ್ತೆಯಾಗಿದ್ದವು.

**

ಪಾನಿಪುರಿ ತಿಂದು ಅಸ್ವಸ್ಥ

ಜೈಪುರ: ನಗರದಲ್ಲಿ ಭಾನುವಾರ ರಸ್ತೆ ಬದಿಯ ಬಂಡಿಯಲ್ಲಿಯ ಪಾನಿಪುರಿ ತಿಂದ 55ಕ್ಕೂ ಹೆಚ್ಚು ಜನರು ವಾಂತಿಭೇದಿಯಿಂದ ತೀವ್ರ ಅಸ್ವಸ್ಥರಾಗಿದ್ದಾರೆ.

ಆ ಪೈಕಿ 44 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಪಾನಿಪುರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry