ಎಲಿನಾ ಸ್ವಿಟೋಲಿನಾಗೆ ಪ್ರಶಸ್ತಿ

7
ಫೈನಲ್‌ನಲ್ಲಿ ರೊಮೇನಿಯಾದ ಹಲೆಪ್‌ಗೆ ಸೋಲು

ಎಲಿನಾ ಸ್ವಿಟೋಲಿನಾಗೆ ಪ್ರಶಸ್ತಿ

Published:
Updated:
ಎಲಿನಾ ಸ್ವಿಟೋಲಿನಾಗೆ ಪ್ರಶಸ್ತಿ

ರೋಮ್ (ಎಎಫ್‌ಪಿ): ಪ್ರಬಲ ಎದುರಾಳಿ, ಸಿಮೋನ ಹಲೆಪ್ ಅವರನ್ನು ಮಣಿಸಿದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಇಟಾಲಿಯನ್ ಓಪನ್ ಟೂರ್ನಿಯ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡರು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ರೊಮೇನಿಯಾದ ಆಟಗಾರ್ತಿಯನ್ನು 6–0, 6–4ರಿಂದ ಮಣಿಸಿದರು.

ಈ ಮೂಲಕ ಮೂರು ‌ಪ್ರಶಸ್ತಿಗಳನ್ನು ನಿರಂತರವಾಗಿ ಉಳಿಸಿದ ಸಾಧನೆ ಮಾಡಿದರು. ಬಾಕು ಮತ್ತು ದುಬೈನಲ್ಲೂ ಅವರು ಪ್ರಶಸ್ತಿ ಗೆದ್ದಿದ್ದರು.‌

‘ಇಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾದದ್ದು ಅತ್ಯಂತ ಖುಷಿ ತಂದಿದೆ. ಇದು ನನ್ನ ವೃತ್ತಿ ಜೀವನದ ಮಹತ್ವದ ದಿನ’ ಎಂದು ಹೇಳಿದ ಸ್ವಿಟೋಲಿನಾ ‘ಸಿಮೋನಾ ಹಲೆಪ್ ಅವರು ಈ ವಾರ ಉತ್ತಮ ಆಟ ಆಡಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಲೇಬೇಕು’ ಎಂದರು.

ನಡಾಲ್‌ಗೆ ಪ್ರಶಸ್ತಿ: ಪುರುಷರ ವಿಭಾಗದಲ್ಲಿ ಸ್ಪೇನ್‌ನ ರಫೆಲ್ ನಡಾಲ್‌ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6–1, 1–6, 6–3ರಿಂದ ಸೋಲಿಸಿ ಪ್ರಶಸ್ತಿ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry