ಐಪಿಎಲ್‌ ಹಣಾಹಣಿ: ಫೈನಲ್‌ನತ್ತ ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಚಿತ್ತ

7

ಐಪಿಎಲ್‌ ಹಣಾಹಣಿ: ಫೈನಲ್‌ನತ್ತ ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಚಿತ್ತ

Published:
Updated:
ಐಪಿಎಲ್‌ ಹಣಾಹಣಿ: ಫೈನಲ್‌ನತ್ತ ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಚಿತ್ತ

ಮುಂಬೈ: ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಐಪಿಎಲ್‌ 11ನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸುವತ್ತ ಚಿತ್ತ ನೆಟ್ಟಿವೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಮೊದಲ ಕ್ವಾಲಿಫೈಯರ್‌ ಹೋರಾಟದಲ್ಲಿ ಉಭಯ ತಂಡಗಳು ಸೆಣಸಲಿವೆ. ಈ ಬಾರಿಯ ಲೀಗ್‌ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿರುವ ಮಹೇಂದ್ರ ಸಿಂಗ್‌ ದೋನಿ ಮತ್ತು ಕೇನ್‌ ವಿಲಿಯಮ್ಸನ್‌ ಮುಖಾಮುಖಿಯಾಗುತ್ತಿರುವುದು ಪಂದ್ಯದ ಬಗೆಗಿನ ಕುತೂಹಲ ಹೆಚ್ಚುವಂತೆ ಮಾಡಿದೆ.

ಸನ್‌ರೈಸರ್ಸ್‌ ತಂಡ ಈ ಬಾರಿ ಅಮೋಘ ಆಟ ಆಡಿ ಅಭಿಮಾನಿಗಳ ಮನ ಗೆದ್ದಿದೆ. ನ್ಯೂಜಿಲೆಂಡ್‌ನ ವಿಲಿಯಮ್ಸನ್‌ ಸಾರಥ್ಯದ ತಂಡ ಈ ಬಾರಿ ಆಡಿದ 14 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಗೆದ್ದಿದೆ. ದೋನಿ ಮುಂದಾಳತ್ವದ ಸೂಪರ್‌ ಕಿಂಗ್ಸ್‌ ಕೂಡ ಇಷ್ಟೇ ಪಂದ್ಯಗಳಲ್ಲಿ ವಿಜಯಿಯಾಗಿದೆ. ಆದರೆ ಸನ್‌ರೈಸರ್ಸ್‌ ತಂಡ ಉತ್ತಮ ರನ್‌ ಸರಾಸರಿ ಆಧಾರದಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

ಹೈದರಾಬಾದ್‌ನ ತಂಡ ಬ್ಯಾಟಿಂಗ್‌ನಲ್ಲಿ ನಾಯಕ ವಿಲಿಯಮ್ಸನ್‌ ಮತ್ತು ಶಿಖರ್‌ ಧವನ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಬಾರಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಕೇನ್‌, ಎರಡನೇ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 661ರನ್‌ಗಳಿವೆ. ಧವನ್‌ 437ರನ್‌ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry