ಸೋಮವಾರವೂ ಮುಂದುವರೆದ ಮಳೆ

7
ರಾಮನಗರ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ

ಸೋಮವಾರವೂ ಮುಂದುವರೆದ ಮಳೆ

Published:
Updated:
ಸೋಮವಾರವೂ ಮುಂದುವರೆದ ಮಳೆ

ರಾಮನಗರ: ಜಿಲ್ಲೆಯಾದ್ಯಂತ ಸೋಮವಾರವು ಮಳೆ ಮುಂದುವರೆದಿದೆ. ಸಂಜೆ ಸುಮಾರು 6.30ರ ಸಮಯದಲ್ಲಿ  ಗುಡುಗು ಮಿಂಚು ಸಹಿತ ಮಳೆರಾಯ ಆರ್ಭಟಿಸಿದ್ದಾನೆ.

ಸ್ವಲ್ಪ ಸಮಯದ ನಂತರ ತುಂತುರು ಹನಿಯಂತೆ ಮಳೆ ಮಂದುವರೆದಿದ್ದು. ಭಾನುವಾರ ರಾತ್ರಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಸರಾಸರಿ 22 ಮಿಲಿಮೀಟರ್‌ನಷ್ಟು ಮಳೆಯಾಗಿದೆ ಎಂದು ದಾಖಲಾಗಿದೆ.

ಮಾಗಡಿ ತಾಲ್ಲೂಕಿನಲ್ಲಿ 18 ಮಿ.ಮೀ , ಕನಕಪುರ 15 ಮಿ.ಮೀ. ಹಾಗೂ ರಾಮನಗರದಲ್ಲಿ 13 ಮಿ.ಮೀ. ನಷ್ಟು ಸರಾಸರಿ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ತಾಪಮಾನದ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ರಾತ್ರಿ ಚಳಿಯ ವಾತಾವರಣ ಸೃಷ್ಠಿಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry