‘ಫೇಕ್‌ ಫೋಸ್ಟ್‌ ಅಂತ ಹೇಳಿರಲಿಕ್ಕಿಲ್ಲ’

7

‘ಫೇಕ್‌ ಫೋಸ್ಟ್‌ ಅಂತ ಹೇಳಿರಲಿಕ್ಕಿಲ್ಲ’

Published:
Updated:

ಕಾರವಾರ: ‘ಹೌದು, ಫೇಸ್‌ಬುಕ್‌ನಲ್ಲಿ ನಾನು ಪೋಸ್ಟ್ ಹಾಕಿದ್ದೇನೆ. ಅದು ತಪ್ಪು, ಸುಳ್ಳು ಅಂತ ಯಾರು ಹೇಳಿದ್ದಾರೆ? ಎಲ್ಲ ಗೊತ್ತಿದ್ದಿದ್ದನ್ನೇ ಬರೆದಿದ್ದೇನಲ್ಲ ನಾನು?’ ಎಂದು ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಹೆಬ್ಬಾರರ ಫೇಸ್‌ಬುಕ್ ಪೋಸ್ಟ್ ಫೇಕ್. ಅದು ಅವರದ್ದಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ?’ ಎಂದು ಕೇಳಿದ್ದಕ್ಕೆ ಅವರು ಈ ರೀತಿ ಉತ್ತರಿಸಿದರು.

‘ನಾನು ಮಾಡಿದ ಪೋಸ್ಟ್ ಫೇಕ್ ಅಂತ ಹೇಳಿದಾರಾ? ಹಾಗೆ ಹೇಳಿರಲಿಕ್ಕಿಲ್ಲ’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಶಿವರಾಮ ಹೆಬ್ಬಾರ ಅವರ ಪತ್ನಿಗೆ ಬಿಜೆಪಿ ಮುಖಂಡರು ಕರೆ ಮಾಡಿ,  ಹೆಬ್ಬಾರ ಅವರು ಬಿಜೆಪಿ ಸೇರುವಂತೆ ಆಮಿಷವೊಡ್ಡಿದ್ದರು ಎಂದು ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಅದಕ್ಕೆ ಸಂಬಂಧಿಸಿದ ಆಡಿಯೊ ಬಿಡುಗಡೆ ಮಾಡಿದ್ದರು. ಆದರೆ, ತಮ್ಮ ಪತ್ನಿಯನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೆಬ್ಬಾರ ಫೇಸ್‌ಬುಕ್‌ನ ತಮ್ಮ ಪುಟದಲ್ಲಿ ಬರೆದುಕೊಂಡಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry