ತಿಗಳರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

7

ತಿಗಳರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

Published:
Updated:

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ನೆಲಮಂಗಲ: ತಾಲ್ಲೂಕು ತಿಗಳರ ಪತ್ತಿನ ಸಹಕಾರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ 70, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಶೇ 65 ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯೊಂದಿಗೆ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಅಧ್ಯಕ್ಷ ಬಿ.ಎಸ್‌.ಸಿದ್ದಗಂಗಯ್ಯ ತಿಳಿಸಿದ್ದಾರೆ. ಮಾಹಿತಿಗೆ ಸಂಪರ್ಕಿಸಿ ಮೊ: 9844919930

ಎಂ.ಐ.ಗಾಣಿಗಿಗೆ ಸಾವಯವ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಸಾವಯವ ಕೃಷಿ ಉತ್ಪಾದಕರ ಸೊಸೈಟಿ ವತಿಯಿಂದ ನೀಡುವ ‘ಸಾವಯವ ಪ್ರಶಸ್ತಿ' ಯನ್ನು ನಬಾರ್ಡ್‌ನ ಎಂ.ಐ.ಗಾಣಿಗಿ ಅವರಿಗೆ ನೀಡಲಾಗಿದೆ.

ಪ್ರೆಸ್‍ಕ್ಲಬ್‍ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಲಾನಯನ ಇಲಾಖೆಯ ಆಯುಕ್ತ ಪ್ರಭಾಸ್ ಚಂದ್ರ ರೇ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ತಾಂತ್ರಿಕ ಮೇಳಕ್ಕೆ ಇಂದು ಚಾಲನೆ

ಬೆಂಗಳೂರು: ನಗರದ ದಯಾನಂದ ಸಾಗರ್ ಕಾಲೇಜಿನಲ್ಲಿ ಮಂಗಳವಾರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ರಾಜ್ಯಮಟ್ಟದ ತಾಂತ್ರಿಕ ಮೇಳಕ್ಕೆ ಚಾಲನೆ ದೊರೆಯಲಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಆಯೋಜಿಸಿರುವ ಮೇಳಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಚಾಲನೆ ನೀಡಲಿದ್ದಾರೆ.

ವಿವಿಧ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ.

ಮಾವು, ಹಲಸು ಮೇಳಕ್ಕೆ ಚಾಲನೆ

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್) ವತಿಯಿಂದ ಆಯೋಜಿಸಲಾಗಿರುವ ಮಾವು ಮತ್ತು ಹಲಸು ಮೇಳಕ್ಕೆ ಹಡ್ಸನ್‌ ವೃತ್ತದ ಮಳಿಗೆಯಲ್ಲಿ ಮಂಗಳವಾರ ಚಾಲನೆ ದೊರೆಯಲಿದೆ.

‘ರೈತರು ಬೆಳೆದ ಮಾವಿನ ಫಲಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಹಾಗೂ ಗ್ರಾಹಕರಿಗೆ ರಾಸಾಯನಿಕಮುಕ್ತ ಸಾವಯವ ಹಣ್ಣುಗಳನ್ನು ನೀಡುವ ಉದ್ದೇಶದಿಂದ ಮಾವು ಹಾಗೂ ಹಲಸು ಮೇಳವನ್ನು ಆಯೋಜಿಸಲಾಗಿದೆ. ಮೇಳವು ಜೂನ್ ಅಂತ್ಯದವರೆಗೂ ನಡೆಯಲಿದೆ’ ಎಂದು ಹಾಪ್‍ಕಾಮ್ಸ್‌ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಆರೋಗ್ಯ ತಪಾಸಣೆ

ಬೆಂಗಳೂರು: ಬಸವನಗುಡಿಯಲ್ಲಿ ಇರುವ ಗುಣಶೀಲ ಫರ್ಟಿಲಿಟಿ ಸೆಂಟರ್, ಇದೇ 26 (ಶನಿವಾರ) ರಂದು ಸಂತಾನಹೀನತೆ ಸಮಸ್ಯೆ ಎದುರಿ

ಸುತ್ತಿರುವ ದಂಪತಿಗಳಿಗೆ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.

ಶಿಬಿರವು ಬೆಳಿಗ್ಗೆ 8-30 ರಿಂದ ಮಧ್ಯಾಹ್ನ 2.30 ರವರೆಗೆ ನಡೆಯಲಿದೆ.  ಡಾ. ದೇವಿಕಾ ಗುಣಶೀಲ ಮತ್ತು ವೈದ್ಯರ ತಂಡ ತಪಾಸಣೆ ನಡೆಸಿ

ಮತ್ತು ಸಲಹೆಗಳನ್ನು ನೀಡಲಿದೆ. ಆಸಕ್ತ ದಂಪತಿ ಮುಂಚಿತವಾಗಿ ಹೆಸರು  ನೋಂದಾಯಿಸಬೇಕು. ಮಾಹಿತಿಗೆ 080-4646 2600 ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry