ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

7

ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Published:
Updated:
ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಬಾಲೇಶ್ವರ/ಒಡಿಶಾ: ಶಬ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಸೋಮವಾರ ಯಶಸ್ವಿಯಾಗಿ ನಡೆಯಿತು.

ಒಡಿಶಾದ ಕಡಲತೀರದ ಚಾಂದಿಪುರ ಉಡ್ಡಯನ ಕೇಂದ್ರದಿಂದ ಬೆಳಿಗ್ಗೆ 10.40ಕ್ಕೆ ಕ್ಷಿಪಣಿ ಉಡಾವಣೆ ಮಾಡಲಾಯಿತು.ನಿಗದಿತ ಗುರಿಯನ್ನು ಕ್ಷಿಪಣಿಯು ನಿಖರವಾಗಿ ತಲುಪಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಡಿಆರ್‌ಡಿಒ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ವಿಶೇಷಗಳು

* ಈ ಹಿಂದಿನ ಬ್ರಹ್ಮೋಸ್‌ ಸರಣಿಯ ಕ್ಷಿಪಣಿಗಳಿಗಿಂತ ಇದು ಹೆಚ್ಚಿನ ಸಾಮರ್ಥ್ಯ, ಹೊಸ ತಂತ್ರಜ್ಞಾನ ಮತ್ತು ಹಲವು ವಿಶೇಷತೆಗಳನ್ನು ಹೊಂದಿದೆ.

* ಡಿಆರ್‌ಡಿಒ ಮತ್ತು ರಷ್ಯಾದ ಎನ್‌ಪಿಒ ಮಷಿನೊಸ್ಟ್ರೊಯೆನಿಯಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.

* 400 ಕಿಲೋ ಮೀಟರ್‌ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಸಾಮರ್ಥ್ಯವನ್ನು 800 ಕಿ.ಮೀ ವ್ಯಾಪ್ತಿ ವರೆಗೂ ವಿಸ್ತರಿಸುವ ತಂತ್ರಜ್ಞಾನ ಅಳವಡಿಸಲಾಗಿದೆ. ಕ್ಷಿಪಣಿಯ ಬಾಳಿಕೆ 15ವರ್ಷಕ್ಕೆ ಹೆಚ್ಚಿಸಲಾಗಿದೆ.

* ಮೊದಲ ಬಾರಿ ಭಾರತೀಯ ವಾಯುಪಡೆಯ ಸುಖೋಯ್–30 ಎಂಕೆಐ ಯುದ್ಧ ವಿಮಾನದ ಮೂಲಕ ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ ನಡೆದಿತ್ತು.

* ಸುಖೋಯ್–40 ಯುದ್ಧ ವಿಮಾನ ದಲ್ಲೂ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ಅಳವಡಿಕೆ ಕಾರ್ಯ ಪ್ರಗತಿ

* ಈ ಕ್ಷಿಪಣಿ ಭೂಸೇನೆ, ನೌಕಾದಳ ಮತ್ತು ವಾಯುಪಡೆಯ ಶಸ್ತ್ರಾಗಾರಗಳನ್ನು ಸೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry