ಫರ್ನಿಚರ್‌ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

7

ಫರ್ನಿಚರ್‌ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

Published:
Updated:

ಬೆಂಗಳೂರು: ಫರ್ನಿಚರ್‌ ಅಂಗಡಿಯೊಂದರ ಮಾಲೀಕನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಪ್ರಕರಣ ಪುಲಕೇಶಿ ನಗರದ ಅಸಾಯ್‌ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಅಂಗಡಿಯ ಮಾಲೀಕ ಮಸೂದ್‌ ಅಲಿ (62) ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಅಲಿ ಅವರು ಕುಕ್‌ಟೌನ್‌ನಲ್ಲಿರುವ ಡಿಕೋಸ್ತಾ ಬಡಾವಣೆಯಲ್ಲಿರುವ ಮನೆಯಿಂದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಅಂಗಡಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ’ ಎಂದು ಪುಲಕೇಶಿನಗರದ ಪೊಲೀಸರು ತಿಳಿಸಿದ್ದಾರೆ.

‘ಅಲಿ ತಮಗೆ ಸೇರಿದ ಕಾರಿನಲ್ಲಿ ಹೊರಟಾಗ ಇನ್ನೊಂದು ಕಾರಿನಲ್ಲಿ ಅಪರಿಚಿತ ವ್ಯಕ್ತಿಗಳು ಅವರನ್ನು ಹಿಂಬಾಲಿಸಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ಆ ವ್ಯಕ್ತಿಗಳು ಅಲಿ ಅವರಿದ್ದ ಕಾರಿಗೆ ಹಿಂದಿನಿಂದ ಗುದ್ದಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ ಅಲಿ, ಕೆಳಗೆ ಇಳಿದು ಗುದ್ದಿರುವ ಬಗ್ಗೆ ಅಪರಿಚಿತ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಅಪರಿಚಿತರು ರಿವಾಲ್ವರ್‌ ತೆಗೆದಿದ್ದಾರೆ. ಅದನ್ನು ನೋಡಿದ ಅಲಿ ಓಡಲು ಶುರು ಮಾಡಿದಾಗ ಅಪರಿಚಿತರು ಹಾರಿಸಿದ ಗುಂಡು ಬೆನ್ನು ಸವರಿಕೊಂಡು ಹೋಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry