ಜಯನಗರ ಟಿಕೆಟ್: ಬಿಜೆಪಿಯಲ್ಲಿ ಭಿನ್ನಮತ

7

ಜಯನಗರ ಟಿಕೆಟ್: ಬಿಜೆಪಿಯಲ್ಲಿ ಭಿನ್ನಮತ

Published:
Updated:

ಬೆಂಗಳೂರು: ಜಯನಗರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಷಯವು ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ.

ದಿವಂಗತ ಬಿ.ಎನ್‌.ವಿಜಯಕುಮಾರ್‌ ಅವರ ತಮ್ಮ ಪ್ರಹ್ಲಾದ್‌ ಬಾಬು ಅವರಿಗೆ ಟಿಕೆಟ್‌ ನೀಡಲು ಪಕ್ಷ ಚಿಂತನೆ ನಡೆಸಿದೆ. ಈ ಮೂಲಕ ಅನುಕಂಪದ ಮತಗಳನ್ನು ಗಿಟ್ಟಿಸುವುದು ಪಕ್ಷದ ಆಲೋಚನೆ. ಇದಕ್ಕೆ ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಮಾಜಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಜಿ ಮೇಯರ್‌ ಎಸ್‌.ಕೆ. ನಟರಾಜ್‌, ಪಾಲಿಕೆ ಸದಸ್ಯ ಎನ್‌.ನಾಗರಾಜು, ಮಾಜಿ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಸೋಮಶೇಖರ್‌ ನಗರದಲ್ಲಿ ಸೋಮವಾರ ಸಭೆ ನಡೆಸಿದರು. ನಟರಾಜ್‌, ನಾಗರಾಜು ಹಾಗೂ ರಾಮಮೂರ್ತಿ ಪೈಕಿ ಒಬ್ಬರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿಸಲಾಯಿತು.

‘ವಿಜಯಕುಮಾರ್‌ ಅವರು ಉತ್ತಮ ವ್ಯಕ್ತಿ. ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಬೇಕು ಎಂಬ ಚರ್ಚೆ ನಡೆದಿದೆ. ಅವರ ತಮ್ಮ ಒಂದೇ ಒಂದು ದಿನ ಪಕ್ಷಕ್ಕಾಗಿ ಕೆಲಸ ಮಾಡಿಲ್ಲ. ಅವರಿಗೆ ಮಣೆ ಹಾಕುವುದು ಸರಿಯಲ್ಲ. ವಿಜಯಕುಮಾರ್‌ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡಿದರೆ ನಾವು ಪ್ರಚಾರಕ್ಕೆ ಹೋಗುವುದಿಲ್ಲ. ಯಾವುದೇ ಸಹಕಾರ ನೀಡುವುದಿಲ್ಲ. ಮೂವರ ಪೈಕಿ ಒಬ್ಬರಿಗೆ ಅವಕಾಶ ನೀಡಿದರೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಎನ್‌.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry