ದಲಿತ ವ್ಯಕ್ತಿಯ ಹತ್ಯೆ: ಐವರ ಬಂಧನ

7
ಚಿಂದಿ ಆಯುತ್ತಿದ್ದ ದಂಪತಿಯನ್ನು ಕಳ್ಳರೆಂದು ಭಾವಿಸಿ ಮನಸೋ ಇಚ್ಛೆ ಹಲ್ಲೆ

ದಲಿತ ವ್ಯಕ್ತಿಯ ಹತ್ಯೆ: ಐವರ ಬಂಧನ

Published:
Updated:
ದಲಿತ ವ್ಯಕ್ತಿಯ ಹತ್ಯೆ: ಐವರ ಬಂಧನ

ರಾಜಕೋಟ್‌ (ಗುಜರಾತ್‌): ಚಿಂದಿ ಆಯುತ್ತಿದ್ದ ದಲಿತ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಿ ಕೊಂದು ಹಾಕಿದ ಐವರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.

ಮುಕೇಶ ವಾನಿಯಾ (35) ಎಂಬ ವ್ಯಕ್ತಿಯ ಸೊಂಟಕ್ಕೆ ಹಗ್ಗ ಕಟ್ಟಿ ಒಬ್ಬಾಟ ಹಿಡಿದುಕೊಂಡಿದ್ದರೆ ಉಳಿದವರು ಕೋಲಿನಿಂದ ಮನಸೋ ಇಚ್ಛೆ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವಡ್‌ಗಾಂ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೆವಾನಿ ಈ ಕೃತ್ಯದ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಹಿಂದುಳಿದ ಜಾತಿಗೆ ಸೇರಿದ ಮುಕೇಶ್‌ ವಾನಿಯಾ ಅವರನ್ನು ಫ್ಯಾಕ್ಟರಿ ಮಾಲೀಕರು ರಾಜ್‌ಕೋಟ್‌ನಲ್ಲಿ ಶೋಚನೀಯವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಅವರ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ' ಎಂದಿರುವ ಮೇವಾನಿ, #GujaratIsNotSafe4Dalits ಎಂಬ ಹ್ಯಾಷ್‌ಟ್ಯಾಗ್‌ ಜತೆ ಟ್ವೀಟ್ ಮಾಡಿದ್ದಾರೆ.

‘ಇಲ್ಲಿನ ಶಾಪರ್‌ ನಗರದಲ್ಲಿನ ರಾದಾಡಿಯಾ ಕೈಗಾರಿಕಾ ‍ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. ಮುಕೇಶ ವಾನಿಯಾ ಮತ್ತು ಆತನ ಪತ್ನಿಯನ್ನು ಕಳ್ಳರೆಂದು ಭಾವಿಸಿದ ಕಾರ್ಖಾನೆಯ ಮಾಲೀಕ ಹಾಗೂ ಕೆಲವರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ರಾಜ್‌ಕೋಟ್‌ (ಗ್ರಾಮೀಣ) ಉಸ್ತುವಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರುತಿ ಮೆಹ್ತಾ ತಿಳಿಸಿದ್ದಾರೆ.

‘ನಾವು ಗುಜರಾತ್‌ ಕೈಗಾರಿಕಾ ಅಭಿವೃದ್ಧಿ ನಿಗಮ (ಜಿಐಡಿಸಿ) ಪ್ರದೇಶದಲ್ಲಿ ಚಿಂದಿ ಆಯುತ್ತಿದ್ದಾಗ, ಐವರು ನಮ್ಮ ಮೇಲೆ ಹಲ್ಲೆ ಮಾಡಿದರು’ ಎಂದು ವಾನಿಯಾ ಪತ್ನಿ ಜಯಾಬೆನ್‌ ಅವರು ಶಾಪರ್– ವೆರವಾಲ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ಅವರು ಹೇಳಿದ್ದಾರೆ.

ರಾಜಕೋಟ್‌ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮುಕೇಶ ಸಾವಿಗೀಡಾಗಿದ್ದಾರೆ ಎಂದು ಶಾಪರ್–ವೆರವಾಲ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕಾರ್ಖಾನೆಯ ಮಾಲೀಕ ಜಯಸುಖ್ ರಾದಾಡಿಯಾ ಮತ್ತು ಅವನ ಸ್ನೇಹಿತರಾದ ಚಿರಾಗ್ ಪಟೇಲ್, ದಿವ್ಯೇಶ್ ಪಟೇಲ್ ಹಾಗೂ ತೇಜಸ್‌ ಝಲಾ ಅವರನ್ನು ಬಂಧಿಸಿರುವ ಪೊಲೀಸರು, ಎಫ್‌ಐಆರ್‌ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry