ಟಿ.ಟಿ: ಭಾರತಕ್ಕೆ ಬೆಳ್ಳಿ

7

ಟಿ.ಟಿ: ಭಾರತಕ್ಕೆ ಬೆಳ್ಳಿ

Published:
Updated:
ಟಿ.ಟಿ: ಭಾರತಕ್ಕೆ ಬೆಳ್ಳಿ

ನವದೆಹಲಿ: ಭಾರತದ ಜ್ಞಾನಶೇಖರನ್‌ ಸತ್ಯನ್‌ ಹಾಗೂ ಸನಿಲ್‌ ಶೆಟ್ಟಿ ಜೋಡಿಯು ಥಾಯ್ಲೆಂಡ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಸೋಮವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿಯು ಜರ್ಮನಿಯ ಟೊಬಿಯಸ್‌ ಹಿಪ್ಲರ್‌ ಹಾಗೂ ಕಿಲಿಯಾನ್‌ ಒರ್ಟ್‌ ಜೋಡಿಯ ವಿರುದ್ಧ 11–9, 12–14, 9–11, 7–11ರಿಂದ ಸೋತಿತು.

ಸತ್ಯನ್‌ ಹಾಗೂ ಸನಿಲ್‌ ಜೋಡಿಯು ಮೊದಲ ಸುತ್ತಿನಲ್ಲಿ ಜಪಾನ್‌ ಅನ್ನು 3–1ರಿಂದ ಮಣಿಸಿತ್ತು. ಎರಡನೇ ಸುತ್ತಿನಲ್ಲಿ ಮಲೇಷ್ಯಾ ಜೋಡಿಯನ್ನು 3–0ಯಿಂದ ಪರಾಭವಗೊಳಿಸಿತ್ತು. ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಹರ್ಮಿತ್‌ ದೇಸಾಯಿ ಹಾಗೂ ಮಾನವ್‌ ಠಕ್ಕರ್‌ ಜೋಡಿಯನ್ನು 3–2ರಿಂದ ಸೋಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry