ಮುಂಬೈ ಸೋಲಿಗೆ ಪ್ರೀತಿ ಖುಷಿ!

7

ಮುಂಬೈ ಸೋಲಿಗೆ ಪ್ರೀತಿ ಖುಷಿ!

Published:
Updated:
ಮುಂಬೈ ಸೋಲಿಗೆ ಪ್ರೀತಿ ಖುಷಿ!

ಬೆಂಗಳೂರು: ಐಪಿಎಲ್‌ ಟೂರ್ನಿಯ ಪ್ಲೇ ಆಫ್ ಹಂತಕ್ಕೆ ಏರಲು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವಿಫಲವಾದದ್ದಕ್ಕೆ ಕಿಂಗ್ಸ್ ಇಲೆವನ್‌ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಖುಷಿಪಟ್ಟ ವಿಡಿಯೊ ಸೋಮವಾರ ವೈರಲ್ ಆಗಿತ್ತು.

ಪ್ಲೇ ಆಫ್ ಹಂತಕ್ಕೇರಲು ಗೆಲುವು ಅನಿವಾರ್ಯ ಆಗಿದ್ದ ಭಾನುವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಡೆಲ್ಲಿ ಡೇರ್ ಡೆವಿಲ್ಸ್ ಎದುರು ಸೋತಿತ್ತು. ಪಂದ್ಯದ ನಂತರ ‘ಮುಂಬೈ ಪ್ಲೇ ಆಫ್‌ಗೆ ತಲುಪದೇ ಇರುವುದು ನನಗೆ ತುಂಬ ಖುಷಿ ನೀಡಿದೆ’ ಎಂದು ಪ್ರೀತಿ ಹೇಳಿದ ವಿಡಿಯೊ ವಿವಾದ ಸೃಷ್ಟಿಸಿತ್ತು.

ಈ ವಿಡಿಯೊವನ್ನು ಜೋಗ್ ಟ್ವೀಟ್ಸ್ ಎಂಬ ಹೆಸರಿನ ಟ್ವಿಟರ್‌ ಬಳಕೆದಾರರು ಅಪ್‌ಲೋಡ್ ಮಾಡಿದ್ದರು.

ಹೇಳಿಕೆಗೆ ವಿರೋಧ ವ್ಯಕ್ತವಾದ ನಂತರ ಪ್ರೀತಿ ಜಿಂಟಾ ಸ್ಪಷ್ಟನೆ ನೀಡಿದ್ದಾರೆ.

‘ಮುಂಬೈ ಪ್ಲೇ ಆಫ್‌ಗೆ ಹೋಗಲು ವಿಫಲವಾದರೆ ನಮ್ಮ ತಂಡಕ್ಕೆ ಅವಕಾಶ ಇದೆ ಎಂಬ ಕಾರಣಕ್ಕೆ ಖುಷಿಪಟ್ಟಿದ್ದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry