ಮಗಳೊಂದಿಗೆ ಆಟವಾಡಿದ ದೋನಿ

7

ಮಗಳೊಂದಿಗೆ ಆಟವಾಡಿದ ದೋನಿ

Published:
Updated:
ಮಗಳೊಂದಿಗೆ ಆಟವಾಡಿದ ದೋನಿ

ಬೆಂಗಳೂರು: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಪುತ್ರಿ ಜೀವಾ ಜೊತೆ ಶನಿವಾರ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ (ಎಂಸಿಎ) ಆಟವಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರಿನ ಪಂದ್ಯದಲ್ಲಿ ಗೆದ್ದ ನಂತರ ದೋನಿ, ಅಂಗಳದಲ್ಲಿ ಮಂಡಿಯೂರಿ ಕುಳಿತಿರುತ್ತಾರೆ. ಆಗ ಜೀವಾ, ಅಪ್ಪನ ತಲೆಯ ಮೇಲಿನ ಟೋಪಿ ತೆಗೆಯಲು ಮುಂದಾಗುತ್ತಾಳೆ.

ಆಗ ದೋನಿ ತಪ್ಪಿಸಿಕೊಂಡು ಎಡಕ್ಕೆ ಹೋಗುತ್ತಾರೆ. ನಂತರ ನಗುತ್ತಾ ಮತ್ತೆ ‘ಮಹಿ’ ಬಳಿ ಬರುವ ಜೀವಾ ಟೋಪಿ ತೆಗೆದು ಖುಷಿ ಪಡುತ್ತಾಳೆ. ನಂತರ ಮತ್ತೆ ಅದನ್ನು ದೋನಿ ತಲೆ ಮೇಲಿಟ್ಟು ಕುಣಿಯುತ್ತಾ ಅಂಗಳದಿಂದ ಆಚೆ ಹೋಗುವ ದೃಶ್ಯ ಈ ವಿಡಿಯೊದಲ್ಲಿದೆ.

ಶನಿವಾರ ಸೂಪರ್‌ ಕಿಂಗ್ಸ್‌ನ ಚಿಯರ್‌ ಲೀಡರ್‌ ತಂಡದ ಸದಸ್ಯರೊಂದಿಗೆ ಛಾಯಚಿತ್ರ ತೆಗೆಸಿಕೊಂಡಿರುವ ದೋನಿ, ಎಂಸಿಎ ಮೈದಾನದ ಸಿಬ್ಬಂದಿ ಜೊತೆಯೂ ಕಾಲ ಕಳೆದಿದ್ದಾರೆ. ಈ ಚಿತ್ರಗಳನ್ನು ಸೂಪರ್‌ ಕಿಂಗ್ಸ್‌ ಫ್ರಾಂಚೈಸ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಪ್ರಕಟಿಸಿದ್ದು, ಇವು ಅಭಿಮಾನಿಗಳ ಮನ ಗೆದ್ದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry