ಹದಗೆಟ್ಟ ಚಿಂಚೋಳಿ– ಹಳ್ಯಾಳ ರಸ್ತೆ

7

ಹದಗೆಟ್ಟ ಚಿಂಚೋಳಿ– ಹಳ್ಯಾಳ ರಸ್ತೆ

Published:
Updated:
ಹದಗೆಟ್ಟ ಚಿಂಚೋಳಿ– ಹಳ್ಯಾಳ ರಸ್ತೆ

ಅಫಜಲಪುರ: ಚಿಂಚೋಳಿ ಹಳ್ಯಾಳ ಗ್ರಾಮಗಳ ನಡುವಿನ 10 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಎರಡೂ ಗ್ರಾಮಗಳ ಜನರು ಪರದಾಡುವಂತಾಗಿದೆ. ಅಲ್ಲಲ್ಲಿ ತಗ್ಗು ಬಿದ್ದಿದ್ದು, ರಾತ್ರಿ ವೇಳೆಯಲ್ಲಿ ವಾಹನ ಸಂಚಾರ ಇನ್ನಷ್ಟು ಕಷ್ಟವಾಗುತ್ತಿದೆ. ಬಸ್ ಸಂಚಾರಕ್ಕೂ ಸಮಸ್ಯೆ.

ಈ ಹಿಂದೆ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು, ಆದರೆ ವರ್ಷದಲ್ಲಿಯೇ ಸಂಪೂರ್ಣ ರಸ್ತೆ ಕಿತ್ತು ಹೋಗಿದೆ. ಸಂಬಂಧ ಪಟ್ಟ ಇಲಾಖೆ ಯವರು ರಸ್ತೆಯನ್ನು ತಾತ್ಕಾಲಿಕವಾಗಿಯಾದರು ದುರಸ್ತಿ ಮಾಡಬೇಕು. ಈ ಹಿಂದೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು ರೈತರೇ ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಿಸಿದ್ದರು. ಅದು ಮತ್ತೆ ಹಾಳಾಗಿ ಹೋಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಮಳೆ ಆರಂಭವಾದರೆ 2 ಗ್ರಾಮಗಳ ಸಂಪರ್ಕ ಸ್ಥಗಿತವಾಗುತ್ತದೆ. ಜನರು ಅಫಜಲಪುರಕ್ಕೆ ಸಂಚರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಮಳೆಗಾಲ ಆರಂಭವಾಗು ವದ ರೊಳಗಾಗಿ ರಸ್ತೆ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry