‘ನಂಬರ್ ಗೇಮ್‌ನಲ್ಲಿ ಸೋತೆವು’

7

‘ನಂಬರ್ ಗೇಮ್‌ನಲ್ಲಿ ಸೋತೆವು’

Published:
Updated:

ಹೊಸನಗರ: ‘ರಾಜ್ಯದಲ್ಲಿ ಗೆದ್ದ ಬಿಜೆಪಿ, ವಿಧಾನಸೌಧದ ಒಳಗಿನ ನಂಬರ್ ಗೇಮ್‌ನಲ್ಲಿ ಸೋತಿತು’ ಎಂದರು.

‘ಜನರು ತಿರಸ್ಕರಿಸಿದ ಎರಡು ಪಕ್ಷಗಳ ಅಪವಿತ್ರ ಮೈತ್ರಿಯಿಂದಾಗಿ ಅಧಿಕಾರ ಗದ್ದುಗೆ ಏರಲಿರುವುದು ದುಃಖಕರ ಸಂಗತಿ. ಬಿಜೆಪಿಯಿಂದ ಕೊನೆಗಳಿಗೆಯಲ್ಲಿ ಹೊರ ನಡೆದ ಗೋಪಾಲಕೃಷ್ಣ ಬೇಳೂರಿನಿಂದ ಪಕ್ಷಕ್ಕೆ ಯಾವುದೇ ಲಾಭ, ನಷ್ಟ ಆಗಿಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನನ್ನ ಬಗ್ಗೆ ಬೇಳೂರು ಹೀನಾಯವಾಗಿ ಬೈದರೂ ಪ್ರತಿಕ್ರಿಯೆ ನೀಡಲ್ಲ. ಆದರೆ, ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದಕ್ಕೆ  ಕಾಲಕೂಡಿ ಬಂದಾಗ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

ಕ್ಷೇತ್ರದ ಕೆಳದಿ ಸೀಮೆ ಒಂದು ಹೊರತುಪಡಿಸಿ ಎಲ್ಲಾ ಕಡೆಯಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಹೊಸನಗರ ತಾಲ್ಲೂಕಿನ ಎರಡು ಹೋಬಳಿಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಗೆ 20 ಸಾವಿರಕ್ಕೂ ಹೆಚ್ಚು ಮತ ನೀಡಿದೆ ಎಂದರು.

ಪಟಗುಪ್ಪ ಸೇತುವೆ ಕಾಮಗಾರಿ ಸೇರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry