7

ವಂಚಿಸುವ ಜಾಹೀರಾತು: ಎಚ್ಚರ

Published:
Updated:
ವಂಚಿಸುವ ಜಾಹೀರಾತು: ಎಚ್ಚರ

ನೀವು ದೊಡ್ಡ ಮೊತ್ತದ ಬಹುಮಾನ ಗೆದ್ದಿರುವ ಅದೃಷ್ಟಶಾಲಿಗಳು ಎಂಬ ಸಂದೇಶಗಳು ಬಳಕೆದಾರರ ಇ–ಮೇಲ್‌ ಅಥವಾ ಮೊಬೈಲ್‍ಗಳಿಗೆ ಮೇಲಿಂದ ಮೇಲೆ ಬರುತ್ತಲೇ ಇರುತ್ತವೆ. ಇಂತಹ ಸಂದೇಶಗಳು ಏಕೆ ಬರುತ್ತವೆ, ಇವುಗಳನ್ನು ತಡೆಯಲು ಏನು ಮಾಡಬೇಕು ಎಂದು ಅನೇಕರು ಗೊಂದಲಕ್ಕೆ ಒಳಗಾಗಿರುತ್ತಾರೆ.

ಬಹುಮಾನಕ್ಕೆ ಆಯ್ಕೆಯಾಗಿದ್ದೀರಿ ಎಂಬ ಸಂದೇಶಗಳು ಏಕೆ, ಎಲ್ಲಿಂದ ಮತ್ತು ಯಾರಿಂದ ಬರುತ್ತವೆ ಎನ್ನುವುದು ಬಹುತೇಕರನ್ನು ಕಾಡುವ ಪ್ರಶ್ನೆಗಳಾಗಿವೆ.  ನೀವು ಬಹುಮಾನ ಗೆದ್ದ ಅದೃಷ್ಟಶಾಲಿಗಳಾಗಿದ್ದೀರಿ ಎಂದು ಶುಭ ಕೋರಿ ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ಗೆ ಬರುವ ಸಂದೇಶಗಳನ್ನು ಏನು ಮಾಡಬೇಕು? ಆ ಜಾಲತಾಣವನ್ನೇ ಬಳಸಿರದಿದ್ದರೂ ಅಂತಹ ಸಂದೇಶಗಳು ಏಕೆ ಬರುತ್ತವೆ ಎಂದು ಅನೇಕರು ತಲೆಕೆಡಿಸಿಕೊಂಡಿರುತ್ತಾರೆ.

ಈ ಸಂದೇಶಗಳು ದುರುದ್ದೇಶಪೂರಿತ ಜಾಹೀರಾತು ಪ್ರದರ್ಶನದ ಭಾಗವಾಗಿರುತ್ತವೆ. ಇದನ್ನು ‘ಮಾಲ್ವರ್ಟೈಸಿಂಗ್’ (Malvertising) ಎನ್ನುವರು. ಇವು ಕಂಪ್ಯೂಟರ್, ಆಂಡ್ರಾಯ್ಡ್‌ ಫೋನ್‌ ಮತ್ತು ಐಫೋನ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ. ಅಲ್ಲದೆ, ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಲಿಂಕ್‌ಗಳನ್ನು ಬ್ರೌಸ್‌ ಮಾಡುವಾಗಲೂ ಕಂಡು ಬರಬಹುದು.

ಕೆಲ ವರ್ಷಗಳವರೆಗೆ ಈ ರೀತಿಯ ಸಂದೇಶಗಳನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಇತ್ತೀಚೆಗೆ ಈ ಸಮಸ್ಯೆ ಮೊಬೈಲ್‌ ಸಾಧನಗಳಿಗೆ ವ್ಯಾಪಕವಾಗಿ ಹರಡಿದ್ದು, ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಆಂಡ್ರಾಯ್ಡ್‌ ಮೊಬೈಲ್ ಬಳಕೆದಾರರನ್ನು ದಾರಿ ತಪ್ಪಿಸುವ ಜಾಲತಾಣಗಳನ್ನು ಉತ್ತೇಜಿಸುವ  Android.Fakeyouwon ಎಂಬ ಟ್ರೋಜನ್ ಹಾರ್ಸ್‌ ವೈರಸ್‌ ಕುರಿತು ಸೈಬರ್ ಭದ್ರತಾ ಕಂಪನಿ ಸಿಮ್ಯಾಂಟೆಕ್‌ ನಡೆಸಿರುವ ಅಧ್ಯಯನದಲ್ಲಿ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಅಧಿಕೃತ ಜಾಲತಾಣಗಳಲ್ಲಿ ನಕಲಿ ಜಾಹೀರಾತು ಪ್ರಕಟಿಸುವ ಕೆಲ ಸಂಸ್ಥೆಗಳಿಂದ ಹೇಗೆ ದುರುದ್ದೇಶಪೂರಕ ಸಂದೇಶಗಳು ಹರಿದಾಡುತ್ತವೆ ಎಂಬ ಬಗ್ಗೆ ಮತ್ತೊಂದು ಸೈಬರ್ ಭದ್ರತಾ ಸಂಸ್ಥೆ ಕಾನ್ಫಿಯಂಟ್‌ ಕೂಡ ವಿವರಿಸಿತ್ತು. ಇಂತಹ ಸಂದೇಶಗಳ ಪಾಪ್‌ ಅಪ್‌ಗೆ ಓಕೆ ಅಥವಾ ಡಿಸ್ಮಿಸ್‌ ಆಯ್ಕೆ ಒತ್ತಿದರೆ ದೊಡ್ಡ ಮೊತ್ತದ ಬಹುಮಾನಗಳ ಆಮಿಷ ಒಡ್ಡುವ ಜಾಲತಾಣಕ್ಕೆ ಕರೆದೊಯ್ಯುತ್ತವೆ. ಆ ಜಾಲತಾಣಗಳ ಪ್ರಶ್ನೋತ್ತರ ಸರಣಿಗೆ ಉತ್ತರಿಸಲು ಪ್ರಯತ್ನಿಸಿದರೆ ನಿಮ್ಮ ಕಂಪ್ಯೂಟರ್‌ಗೆ ವೈರಸ್‌ ದಾಳಿ ಮಾಡಬಹುದು. ಅಲ್ಲದೆ, ನಿಮ್ಮ ಅನುಮತಿ ಇಲ್ಲದೆ ಫೇಸ್‌ಬುಕ್‌ ಸ್ನೇಹಿತರ ಪಟ್ಟಿಯನ್ನೂ ಅದು ಪಡೆದುಕೊಳ್ಳಬಹುದು.

ಹೀಗಾಗಿ, ನಿಮಗೆ ಈ ರೀತಿಯ ಬಹುಮಾನ ಮತ್ತು ಶುಭಾಶಯ ಸಂದೇಶ ಬಂದಾಗ ಕಂಪ್ಯೂಟರ್‌ ಅಥವಾ ಮೊಬೈಲ್‌ನ ಬ್ರೌಸರ್‌ ಅಪ್ಲಿಕೇಷನ್‌ ಅಂತ್ಯಗೊಳಿಸಿಬಿಡಿ. ಇದಲ್ಲದೆ ಬೇರೆ ಪರಿಹಾರವಿಲ್ಲ.

ನಿಮ್ಮ ಕಂಪ್ಯೂಟರ್‌ ಅಥವಾ ಇನ್ನಿತರ ಸಾಧನಗಳ ಪರದೆಗಳ ಮೇಲೆ ಇಂತಹ ಸಂದೇಶಗಳು ಪದೇಪದೇ ಬರುತ್ತಿದ್ದರೆ, ಆ ಸಾಧನಗಳು ವೈರಸ್‌ ದಾಳಿಗೆ ತುತ್ತಾಗಿವೆ ಎಂದೇ ಅರ್ಥ. ಆಗ, ಆ್ಯಂಟಿ ವೈರಸ್‌ಗಳಾದ Malware bytes Adwance Cleaner (ವಿಂಡೋಸ್‌) ಬಳಸಬಹುದು. ಮೈಕ್ರೊಸಾಫ್ಟ್‌ ತನ್ನದೇ ಆದ ಸಾಫ್ಟ್‌ವೇರ್‌ ಬಿಡುಗಡೆ ಮಾಡಿದೆ. ದುರುದ್ದೇಶಪೂರಕ ಸಂದೇಶಗಳ ಪಾಪ್‌ಅಪ್‌ಗಳನ್ನು ಬ್ಲಾಕ್‌ ಮಾಡುವ ಕುರಿತು ಆ್ಯಪಲ್‌ ಕಂಪನಿಯ ಜಾಲತಾಣದಲ್ಲಿಯೂ ವಿವರವಾದ ಮಾಹಿತಿ ಲಭ್ಯವಿದೆ.

ಇಂತಹ ಸಂದೇಶಗಳು ಬಂದಾಗ ವಹಿಸಬೇಕಾದ ಕ್ರಮಗಳ ಕುರಿತು ಫೇಸ್‌ಬುಕ್‌ ಸಹಾಯ ಕೇಂದ್ರ ಕೆಲ ಸೂಚನೆಗಳನ್ನು ನೀಡಿದೆ. ಬ್ರೌಸಿಂಗ್‌ ಆ್ಯಪ್‌ ಆದ ಗೂಗಲ್‌ ಕ್ರೋಮ್‌, ಡೆಸ್ಕ್‌ಟಾಪ್‌ ಮತ್ತು ಆಂಡ್ರಾಯ್ಡ್‌ ಬ್ರೌಸರ್‌ಗಳಿಗೆ ಹೊಸ ಭದ್ರತಾ ಸೌಲಭ್ಯಗಳನ್ನು ಅಳವಡಿಸಿದೆ. ಮೊಜಿಲ್ಲಾ ಫೈರ್‌ಫಾಕ್ಸ್‌ ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.

ಫೇಸ್‍ಬುಕ್‍ನಲ್ಲಿ ಪಿಡಿಎಫ್ ಫೈಲ್

ಫೇಸ್‍ಬುಕ್‍ನ ಎಲ್ಲ ಬಳಕೆದಾರರು ಬೇಕಾದಾಗಲೆಲ್ಲ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ಮಾತ್ರ ಪಿಡಿಎಫ್ ಫೈಲ್ ಶೇರ್ ಮಾಡಬಹುದು. ಇದಕ್ಕೆ ಫೇಸ್‍ಬುಕ್‍ನಲ್ಲಿ ನಿಮ್ಮದೊಂದು ವಾಣಿಜ್ಯ ಪುಟವಿರಬೇಕು.

ಏನು ಮಾಡಬೇಕು?: ಫೇಸ್‍ಬುಕ್ ಪುಟದ ಮೆನು ಆಯ್ಕೆಗೆ ಹೋಗಿ, ಎಡಭಾಗದಲ್ಲಿ ಇರುವ 'About' ಅನ್ನು ಆಯ್ಕೆ ಮಾಡಿ. ಅದರಲ್ಲಿರುವ 'More info'ದಲ್ಲಿ 'Click Add' Menu'ವಿನಲ್ಲಿ ನೀವು ಪಿಡಿಎಫ್ ಆಯ್ಕೆ ಮಾಡಬೇಕು.

ಫೇಸ್‍ಬುಕ್ ಪುಟದಲ್ಲಷ್ಟೇ ಅಲ್ಲದೆ, ಫೇಸ್‍ಬುಕ್ ಗುಂಪಿನೊಂದಿಗೂ ನೀವು ಪಿಡಿಎಫ್ ಫೈಲ್ ಶೇರ್ ಮಾಡಬಹುದು. ಅದಕ್ಕಾಗಿ, ಸಂಬಂಧಿಸಿದ ಗ್ರೂಪ್‍ನ ಪುಟಕ್ಕೆ ಹೋಗಿ, 'More' ಬಟನ್ ಕ್ಲಿಕ್ ಮಾಡಿ, ಅದರಲ್ಲಿ ಇರುವ 'Add file' ಆಯ್ಕೆ ಬಳಸಿ ಅಪ್‍ಲೋಡ್ ಮಾಡಬೇಕಿರುವ ಪಿಡಿಎಫ್ ಫೈಲ್ ಆಯ್ಕೆ ಮಾಡಿಕೊಳ್ಳಿ.

ಇದಕ್ಕೆ ಇನ್ನೊಂದು ಆಯ್ಕೆ ಇದೆ. ಪುಟದ ಎಡಭಾಗದಲ್ಲಿರುವ 'Files' ಆಯ್ಕೆ ಮಾಡಿ, 'Upload' ಆಯ್ಕೆ ಬಳಸಿ ಫೈಲ್ ಅಪ್‍ಲೋಡ್ ಮಾಡಬಹುದು.

ವೈಯಕ್ತಿಕ ಪುಟಗಳಲ್ಲಿ ಫೋಟೊಗಳು, ವಿಡಿಯೊ, GIF ಮಾದರಿಯ ಫೈಲ್‍ಗಳು ಮತ್ತು ವೆಬ್‍ಲಿಂಕ್‍ಗಳನ್ನು ಶೇರ್ ಮಾಡಲು ಮಿತಿ ಇದೆ. ಇಂತಹ ಸಂದರ್ಭಗಳಲ್ಲಿ ಪಿಡಿಎಫ್ ಫೈಲ್ ಅನ್ನು ಜೆಪಿಇಜೆ ಮಾದರಿಯಲ್ಲಿ ಸೇವ್ ಮಾಡಿಕೊಳ್ಳಬೇಕು. ನಂತರ ಚಿತ್ರವನ್ನಾಗಿ ಪೋಸ್ಟ್ ಮಾಡಬಹುದು.

ಪಿಡಿಎಫ್ ಅನ್ನು ಜೆಪಿಇಜೆ ಫೈಲ್ ಆಗಿ ಪರವರ್ತಿಸಿಕೊಳ್ಳಲು Mac's preview ಅಥವಾ PDF to JPG ಆ್ಯಪ್ ಬಳಸಬಹುದು. ಪುಟದ ಸ್ಕ್ರೀನ್‍ಶಾಟ್ ತೆಗೆದುಕೊಂಡು, ಅದನ್ನು ಕೂಡ ಪೋಸ್ಟ್ ಮಾಡಬಹುದು.

ನಿಮ್ಮ ಫೈಲ್ ಹಲವು ಪುಟಗಳನ್ನು ಒಳಗೊಂಡಿದ್ದರೆ ಅದನ್ನು 'Dropbox' ಅಥವಾ Microsoft OneDrive' ತಾಣಗಳನ್ನು ಬಳಸಿ ಶೇರ್ ಮಾಡಬಹುದು. ಈ ಫೈಲ್ ಒಮ್ಮೆ ಆನ್‍ಲೈನ್‍ನಲ್ಲಿ ದೊರೆತ ಬಳಿಕ ಅದರ ಸಾರ್ವಜನಿಕ ಲಿಂಕ್ ಸೃಷ್ಟಿಸಿ, ಆ ಲಿಂಕ್ ಅನ್ನು ಫೇಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಬಹುದು.

ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry