ವಹೆದ್ದಾರಿಯಲ್ಲೇ ಸಂತೆ: ಜನರ ಪರದಾಟ

7
ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

ವಹೆದ್ದಾರಿಯಲ್ಲೇ ಸಂತೆ: ಜನರ ಪರದಾಟ

Published:
Updated:
ವಹೆದ್ದಾರಿಯಲ್ಲೇ ಸಂತೆ: ಜನರ ಪರದಾಟ

ನಾಯಕನಹಟ್ಟಿ: ಪಟ್ಟಣದ ರಾಜ್ಯ ಹೆದ್ದಾರಿ 45ರಲ್ಲಿ ವಾರದ ಸಂತೆ ನಡೆಯುವುದರಿಂದ ಸಾರ್ವಜನಿಕರು, ವ್ಯಾಪಾರಿಗಳು  ತೊಂದರೆ ಪಡುವಂತಾಗಿದೆ.

ಪ್ರತಿ ಸೋಮವಾರ ನಡೆಯುವ ಸಂತೆಗೆ ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಜನರು ಬರುತ್ತಾರೆ. ರಸ್ತೆಯಲ್ಲಿ ಸಂತೆ ನಡೆಯುವುದರಿಂದ ವಾಹನ ಸವಾರರು, ಜನರು ತೊಂದರೆ ಎದುರಿಸುವಂತಾಗಿದೆ.

ಸ್ಥಳಾವಕಾಶದ ಕೊರತೆ: ಪಟ್ಟಣ ಪಂಚಾಯಿತಿಯು ವಾರದ ಸಂತೆಗೆ ಪಟ್ಟಣದ ಹೃದಯ ಭಾಗದಲ್ಲಿ ಸ್ಥಳವನ್ನು ನಿಗದಿ ಮಾಡಿದೆ. ಆದರೆ ಈ ಸ್ಥಳವು ಚಿಕ್ಕದಾಗಿರುವುದರಿಂದ ವ್ಯಾಪಾರಸ್ಥರು ಹೆದ್ದಾರಿಯಲ್ಲೇ ವ್ಯಾಪಾರ ಮಾಡುತ್ತಾರೆ. ಇದರಿಂದ ವಾಹನ ದಟ್ಟಣೆ ಹೆಚ್ಚಿ, ಜನರು ಪರದಾಡುವಂತಾಗಿದೆ.

ಪ್ರವಾಸಿಗರಿಗೆ ತೊಂದರೆ: ‘ಇಲ್ಲಿ ಕಾಯಕ ಯೋಗಿ ತಿಪ್ಪೇರುದ್ರಸ್ವಾಮಿಯ ಎರಡು ಪ್ರಸಿದ್ಧ ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಇದಕ್ಕೆ ರಾಜ್ಯದ ಹಲವು ಜಿಲ್ಲೆಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಭಕ್ತರು ಬರುತ್ತಾರೆ. ಹೆದ್ದಾರಿಯ ಮೇಲೆಯೇ ಸಂತೆ ನಡೆಯುವುದರಿಂದ ಪ್ರವಾಸಿಗರು, ಭಕ್ತರು ದೇವಾಲಯಕ್ಕೆ ತೆರಳಲು ಹರ ಸಾಹಸ ಪಡುತ್ತಾರೆ’ ಎಂದು ದಳವಾಯಿ ರುದ್ರಮುನಿ ಹೇಳುತ್ತಾರೆ.

ಪಲ್ಲಕ್ಕಿ ಸೇವೆಗೆ ಅಡಚಣೆ: ‘ಗುರುತಿಪ್ಪೇರುದ್ರಸ್ವಾಮಿ ದೇವರ ಪಲ್ಲಕ್ಕಿ ಮೆರವಣಿಗೆಯೂ ಇದೇ ದಾರಿಯಲ್ಲಿ ಸಾಗುತ್ತದೆ. ತರಕಾರಿಗಳ ತ್ಯಾಜ್ಯ ರಾಶಿ ರಸ್ತೆ ಮೇಲೆಯೇ ಸುರಿಯುವುದರಿಂದ ಭಕ್ತರಿಗೆ ಕಿರಿಕಿರಿ ಅನುಭವಿಸು

ವಂತಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಪಿ.ತಿಪ್ಪೇಸ್ವಾಮಿ, ರುದ್ರಮುನಿ ಹೇಳುತ್ತಾರೆ.

ಎಚ್ಚೆತ್ತುಕೊಳ್ಳದ ಸ್ಥಳೀಐ ಆಡಳಿತ–ಆರೋಪ: ‘ದಾವಣಗೆರೆ, ಹೊಸಪೇಟೆ, ಚಳ್ಳಕೆರೆ, ಬಳ್ಳಾರಿ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ವಾರದ ಸಂತೆಯಿಂದ ತೊಂದರೆಯಾಗಿದೆ. ಸಂತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಚನ್ನಕೇಶವಮೂರ್ತಿ ದೂರುತ್ತಾರೆ. ಸಂತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

ವಿ.ಧನಂಜಯ ನಾಯಕನಹಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry