ಜಯನಗರ ಕ್ಷೇತ್ರ: ವಿಜಯ್ ಕುಮಾರ್ ಸಹೋದರ ಬಿ.ಎನ್‌ ಪ್ರಹ್ಲಾದ್‌ಗೆ ಬಿಜೆಪಿ ಟಿಕೇಟ್‌

7

ಜಯನಗರ ಕ್ಷೇತ್ರ: ವಿಜಯ್ ಕುಮಾರ್ ಸಹೋದರ ಬಿ.ಎನ್‌ ಪ್ರಹ್ಲಾದ್‌ಗೆ ಬಿಜೆಪಿ ಟಿಕೇಟ್‌

Published:
Updated:
ಜಯನಗರ ಕ್ಷೇತ್ರ: ವಿಜಯ್ ಕುಮಾರ್ ಸಹೋದರ ಬಿ.ಎನ್‌ ಪ್ರಹ್ಲಾದ್‌ಗೆ ಬಿಜೆಪಿ ಟಿಕೇಟ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ವಿಜಯ ಕುಮಾರ್‌ ಅವರ ನಿಧನದಿಂದ ಮುಂದೂಡಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು ವಿಜಯ್ ಕುಮಾರ್ ಸಹೋದರ ಬಿ.ಎನ್‌ ಪ್ರಹ್ಲಾದ್ ಅವರಿಗೆ ಟೀಕೆಟ್ ನಿಡಲಾಗಿದೆ.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮಂಗಳವಾರ ಬಿ.ಎನ್‌ ಪ್ರಹ್ಲಾದ್ ಅವರಿಗೆ ಟಿಕೇಟ್ ಘೋಷಣೆ  ಮಾಡಿದೆ.  ಜೂನ್‌ 11ರ ಸೋಮವಾರ ಮತದಾನ ನಡೆಯಲಿದೆ. ಜೂನ್‌ 13ರಂದು ಬುಧವಾರ ಫಲಿತಾಂಶ ಪ್ರಕಟವಾಗಲಿದೆ.

2008ರಿಂದ ಎರಡು ಅವಧಿಗೆ ಜಯನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿಜಯ ಕುಮಾರ್‌ ಮೇ 4ರಂದು ನಿಧನರಾದ್ದರಿಂದ ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.

ಕಾಂಗ್ರೆಸ್‌ ಪಕ್ಷದಿಂದ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ, ಜೆಡಿಎಸ್‌ನಿಂದ ಕಾಳೇಗೌಡ ಹಾಗೂ ಪಕ್ಷೇತರರಾಗಿ ‘ಲಂಚ ಮುಕ್ತ ಕರ್ನಾಟಕ’ ಸಂಘಟನೆ ಮುಖಂಡ ರವಿಕೃಷ್ಣಾರೆಡ್ಡಿ ಕಣದಲ್ಲಿದ್ದಾರೆ.

ವಿಜಯ ಕುಮಾರ್‌ ನಿಧನದ ಅನುಕಂಪವನ್ನು ಬಂಡವಾಳ ಮಾಡಿಕೊಳ್ಳುವ ಉದ್ದೇಶದಿಂದ ಬಿಜೆಪಿ ವಿಜಯ್ ಕುಮಾರ್ ಸಹೋದರನಿಗೆ ಟಿಕೇಟ್ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry