ಸಾಣೆಹಳ್ಳಿಯಲ್ಲಿ ರಂಗ ಶಿಕ್ಷಣಕ್ಕೆ ಅರ್ಜಿ ಆಹ್ವಾನ

7

ಸಾಣೆಹಳ್ಳಿಯಲ್ಲಿ ರಂಗ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Published:
Updated:

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶಿವಕುಮಾರ ರಂಗ ಪ್ರಯೋಗ ಶಾಲೆಯು ರಂಗಶಿಕ್ಷಣ ಡಿಪ್ಲೊಮಾಗೆ ಅರ್ಜಿ ಆಹ್ವಾನಿಸಿದೆ.

ಒಂದು ವರ್ಷ ಅವಧಿಯ ರಂಗ ಶಿಕ್ಷಣ ಡಿಪ್ಲೊಮಾಗೆ ರಾಜ್ಯ ಸರ್ಕಾರದ ಮಾನ್ಯತೆ ಇದೆ. ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿಯಾಗಿದ್ದು, ಪದವೀಧರರಿಗೆ ಆದ್ಯತೆ. ತರಬೇತಿ ಅವಧಿಯಲ್ಲಿ ಊಟ, ವಸತಿ ವ್ಯವಸ್ಥೆ ಇರುತ್ತದೆ.

ರಂಗಭೂಮಿ, ಸಾಹಿತ್ಯ ಪರಂಪರೆ, ಅಭಿನಯ ಕುರಿತು ಶಿಕ್ಷಣ ನೀಡಲಾಗುತ್ತದೆ. ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆಮೇಳ, ವೀರಗಾಸೆ, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗವಿನ್ಯಾಸ, ವಸ್ತ್ರವಿನ್ಯಾಸ ಕಲಿಕೆ ಜೊತೆಗೆ ಕಾವ್ಯ, ಸಿನಿಮಾ, ಚಿತ್ರಕಲೆ ಕಮ್ಮಟಗಳು ನಡೆಯುತ್ತವೆ.

ಪ್ರಾಚಾರ್ಯರು, ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ– 577 515, ಹೊಸದುರ್ಗ ತಾಲ್ಲೂಕು ವಿಳಾಸಕ್ಕೆ ಆಸಕ್ತರು ಅರ್ಜಿ ಸಲ್ಲಿಸಬಹುದು. www.theatreschoolsanehalli.org ಜಾಲತಾಣದಿಂದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಜೂನ್‌ 25 ಕೊನೆಯ ದಿನ. ಜೂನ್‌ 27ರಿಂದ 30ರ ವರೆಗೆ ಸಂದರ್ಶನ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಜುಲೈ 15ರಿಂದ ತರಗತಿಗಳು ಆರಂಭವಾಗುತ್ತವೆ. ಮಾಹಿತಿಗೆ ಮೊ: 94483 98144, 97430 95604 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry