ಮುಖ್ಯಮಂತ್ರಿ ಭಾಗ್ಯ

7

ಮುಖ್ಯಮಂತ್ರಿ ಭಾಗ್ಯ

Published:
Updated:

ಹಲವಾರು ವರ್ಗಗಳಿಗೆ ತರಾವರಿ ‘ಭಾಗ್ಯ’ಗಳನ್ನು ಕೊಟ್ಟು ‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದು ಬೀಗುತ್ತಿದ್ದ ಸಿದ್ದರಾಮಯ್ಯನವರು ಯಾರನ್ನು ತಾವು ದೇವರಾಣೆಗೂ ಅವರು ಸಿ.ಎಂ. ಆಗುವುದಿಲ್ಲ’ ಎಂದು ಹಾವಭಾವಗಳಿಂದ ಘೋಷಿಸುತ್ತಿದ್ದರೋ ಅವರಿಗೇ ಅಂದರೆ ಕುಮಾರಸ್ವಾಮಿಯವರಿಗೆ ಈಗ ‘ಮುಖ್ಯಮಂತ್ರಿ ಭಾಗ್ಯ’ ಘೋಷಿಸಿದ್ದಾರೆ.

ಅವರ ಮುಂದೆ ಸಿದ್ದರಾಮಯ್ಯನವರು ಕೈಕಟ್ಟಿ ನಿಂತಿದ್ದುದು ಯಾವ ಕಾಂಗ್ರೆಸಿಗನೂ ನೋಡಬಾರದಂತಹ ದೃಶ್ಯವಾಗಿತ್ತು. ಏಕೆಂದರೆ ಕಾಂಗ್ರೆಸ್ 100 ವರ್ಷಗಳಿಗೂ ಮಿಕ್ಕಿ ಇತಿಹಾಸವುಳ್ಳ ರಾಷ್ಟ್ರೀಯ ಪಕ್ಷ. ಆದರೆ ಅದು ಇಂದು ಕೇವಲ 38 ಸ್ಥಾನಗಳನ್ನು ಗೆದ್ದಿರುವ (ಬಿಎಸ್‌ಪಿಯ ಒಂದು ಸ್ಥಾನ ಸೇರಿ) ಒಂದು ಪ್ರಾದೇಶಿಕ ಪಕ್ಷದ ಮುಂದೆ ಮಂಡಿಯೂರಿ ನಿಂತಿದೆ.

‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ವ್ಯವಸ್ಥೆ’ ಎಂದು ಅದು ಎಷ್ಟೇ ಬೊಬ್ಬಿರಿದರೂ ವಾಸ್ತವದಲ್ಲಿ ಅದು ತಾನು ಅಧಿಕಾರದಿಂದ ವಂಚಿತನಾಗದಿರಲು ಮಾಡಿರುವ ಉಪಾಯ ಅಷ್ಟೇ. ಯಾವುದೇ ಷರತ್ತಿಲ್ಲದೆ ನೀಡಿರುವ ಬೆಂಬಲ ಎಂದರೆ ಟೋಟಲ್ ಸರಂಡರ್ ಅಲ್ಲವೇ? ಈ ಟೋಟಲ್ ಸರಂಡರ್ ಅನ್ನು ಕುಮಾರಸ್ವಾಮಿಯವರು ಟೋಟಲ್ಲಾಗಿ ಬಳಸಿ ಲೋಕಾಯುಕ್ತವನ್ನು ಮರುಸ್ಥಾಪಿಸುವ ಧೈರ್ಯ ಮಾಡುವರೇ? ಅಂದಹಾಗೆ ‘ಸೂಪರ್ ಹೋಂ ಮಿನಿಸ್ಟರ್’ ಆಗಿದ್ದ ಕೆಂಪಯ್ಯನವರು ಈಗೇನು ಮಾಡುತ್ತಿರಬಹುದು?

-ಆನಂದ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry