ಇವರಲ್ಲಿ ಒಬ್ಬರು ಕೇರಳದಿಂದ ಬಂದವರು ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬರುವ ಜನರ ಮೇಲೆ ನಿಗಾ ಇರಿಸಲಾಗಿದೆ. ಕೇರಳದ ಅನೇಕ ವಿದ್ಯಾರ್ಥಿಗಳು ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್ ವಾರ್ಡನ್‌ಗಳಿಗೂ ಈ ಕುರಿತು ಪತ್ರ ಬರೆಯಲಾಗುವುದು ಎಂದರು.