ಉಪಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ: ಎಂ.ಬಿ. ಪಾಟೀಲ

7

ಉಪಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ: ಎಂ.ಬಿ. ಪಾಟೀಲ

Published:
Updated:
ಉಪಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ: ಎಂ.ಬಿ. ಪಾಟೀಲ

ಬೆಂಗಳೂರು: ‘ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನದ ಆಸೆಯೂ ಇದೆ. ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಬೇಕು’ ಎಂದು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಹೇಳಿದರು.

‘ಪಕ್ಷದ ಎಲ್ಲ 78 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ, ಎಲ್ಲರಿ್ಊ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಜಾತಿ, ಸಮುದಾಯ, ಹಿರಿತನ ನೋಡಿ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ದಕ್ಷಿಣ ಕರ್ನಾಟಕ ಭಾಗದ ಪರಮೇಶ್ವರ ಅವರಿಗೆ ಡಿಸಿಎಂ ಕೊಟ್ಟರೆ ಉತ್ತರ ಕರ್ನಾಟಕಕ್ಕೂ ಡಿಸಿಎಂ ಕೊಟ್ಟರೆ ಒಳ್ಳೆಯದು. ಈ ಬಗ್ಗೆ ಸಿದ್ದರಾಮಯ್ಯ ಬಳಿ ಲಿಂಗಾಯತ ಸಮುದಾಯದ ಶಾಸಕರು ವಿನಂತಿ ಮಾಡಿದ್ದೇವೆ’ ಎಂದರು.

‘ಯಾರಿಗೆ ಬೇಕಾದರೂ ಕೊಡಲಿ, ನಾವು ಇಂಥವರಿಗೆ ಕೊಡಿ ಎಂದು ಹೇಳಿಲ್ಲ. ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಕೊಟ್ಟರೂ ಬೇಸರ ಇಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry