ವಿದ್ಯುತ್‌ ಘಟಕದ ವಿರುದ್ಧ ರೈತರ ಅರ್ಜಿ ವಿಚಾರಣೆಗೆ ಅಮೆರಿಕ ‘ಸುಪ್ರೀಂ’ಒಪ್ಪಿಗೆ

7

ವಿದ್ಯುತ್‌ ಘಟಕದ ವಿರುದ್ಧ ರೈತರ ಅರ್ಜಿ ವಿಚಾರಣೆಗೆ ಅಮೆರಿಕ ‘ಸುಪ್ರೀಂ’ಒಪ್ಪಿಗೆ

Published:
Updated:

ವಾಷಿಂಗ್ಟನ್‌: ಗುಜರಾತ್‌ನ ಕಛ್‌ ಜಿಲ್ಲೆಯ ಮುಂದ್ರಾ ನಗರ ಸಮೀಪದ ತುಂಡಾ ಗ್ರಾಮದಲ್ಲಿ ಸ್ಥಾಪಿಸಿರುವ ವಿದ್ಯುತ್‌ ಘಟಕದ ವಿರುದ್ಧ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ವಿಚಾರಣೆಗೆ ಸ್ವೀಕರಿಸಿದೆ.

ಕಲ್ಲಿದ್ದಲು ಆಧಾರಿತ ಟಾಟಾ ಮುಂದ್ರಾ ವಿದ್ಯುತ್‌ ಘಟಕದಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ ಎಂದು ತುಂಡಾ ಗ್ರಾಮಸ್ಥರು ದೂರಿದ್ದಾರೆ. ಅಕ್ಟೋಬರ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಗ್ರಾಮದ ಬುಧಾ ಇಸ್ಮಾಯಿಲ್‌ ಜಾಮ್‌ ನೇತೃತ್ವದಲ್ಲಿ ರೈತರು, ಮೀನುಗಾರರು ಈ ಅರ್ಜಿ ಸಲ್ಲಿಸಿದ್ದಾರೆ.

ವಾಷಿಂಗ್ಟನ್‌ ಮೂಲದ ಅಂತರರಾಷ್ಟ್ರೀಯ ಹಣಕಾಸು ನಿಗಮ (ಐಎಫ್‌ಸಿ) ಈ ಘಟಕ ಸ್ಥಾಪನೆಗೆ ಹಣಕಾಸು ನೆರವು ನೀಡಿದೆ.

1945ರ ಅಂತರರಾಷ್ಟ್ರೀಯ ಸಂಸ್ಥೆಗಳ ವಿನಾಯಿತಿ ಕಾಯ್ದೆ ಅಡಿಯಲ್ಲಿ ಐಎಫ್‌ಸಿಗೆ ಯಾವುದಾದರೂ ವಿನಾಯಿತಿ ದೊರೆಯಲಿದೆಯೇ ಎನ್ನುವುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

2015ರಲ್ಲಿ ಅರ್ಜಿದಾರರು ಅಮೆರಿಕದ ಕೊಲಂಬಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಐಎಫ್‌ಸಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ನಿರ್ಲಕ್ಷ್ಯ, ಅತಿಕ್ರಮಣ ಮತ್ತು ಗುತ್ತಿಗೆ ಒಪ್ಪಂದ ಉಲ್ಲಂಘನೆ ಸೇರಿದಂತೆ ಹಲವು ನಿಯಮಗಳನ್ನು ಕಂಪನಿ ಪಾಲಿಸಿಲ್ಲ ಎಂದು ದೂರಿದ್ದರು.

ಆದರೆ, ಈ ಪ್ರಕರಣದ ವಿಚಾರಣೆಯಲ್ಲಿ ಅರ್ಜಿದಾರರಿಗೆ ಹಿನ್ನಡೆಯಾಯಿತು. ಬಳಿಕ, 2017ರಲ್ಲಿ ಕೊಲಂಬಿಯಾ ಜಿಲ್ಲಾ ಮೇಲ್ಮನವಿ ನ್ಯಾಯಾಲಯಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ನ್ಯಾಯಾಲಯ ಸಹ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry