ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಕ್ತ ಬೆಲೆ ಬರದಿದ್ದರೆ ಎಐ ಮಾರಾಟ ಇಲ್ಲ’

Last Updated 22 ಮೇ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ‘ಸರ್ಕಾರಿ ಸ್ವಾಮ್ಯದ ನಷ್ಟಪೀಡಿತ ನಾಗರಿಕ ವಿಮಾನ ಯಾನ ಸಂಸ್ಥೆ ಏರ್‌ ಇಂಡಿಯಾದ (ಎಐ) ಮಾರಾಟಕ್ಕೆ ಉತ್ತಮ ಬೆಲೆ ಬರದಿದ್ದರೆ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಲಿದೆ' ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್‌. ಎನ್‌. ಚೌಬೆ ಹೇಳಿದ್ದಾರೆ.

‘ಎಐ’ ಖರೀದಿಗೆ ಆಸಕ್ತಿ ಪತ್ರ ಸಲ್ಲಿಸಲು ಈ ತಿಂಗಳ 31 ಕೊನೆಯ ದಿನವಾಗಿದೆ. ಗರಿಷ್ಠ ಮೊತ್ತಕ್ಕೆ ಖರೀದಿಸಲು ಯಾರು ಮುಂದೆ ಬಂದಿದ್ದಾರೆ ಎನ್ನುವುದು ಆಗಸ್ಟ್‌ ತಿಂಗಳಾಂತ್ಯದ ಹೊತ್ತಿಗೆ ತಿಳಿದು ಬರಲಿದೆ. ಗರಿಷ್ಠ ಮೊತ್ತ ನಮೂದಿಸಿದವರಿಗೇ ಮಾರಾಟ ಮಾಡಲಾಗುವುದಿಲ್ಲ.

ವರ್ಷಾಂತ್ಯದ ಹೊತ್ತಿಗೆ ಈ ಷೇರು ವಿಕ್ರಯ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಖರೀದಿ ಬೆಲೆಯು ಕಡಿಮೆ ಮಟ್ಟದಲ್ಲಿ ಇದ್ದರೆ ‘ಎಐ’ ಮಾರಾಟ ಮಾಡುವ ಅಥವಾ ಮಾಡದಿರುವ ಹಕ್ಕನ್ನು ಸರ್ಕಾರ ಹೊಂದಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಖಾಸಗೀಕರಣ ಪ್ರಕ್ರಿಯೆಯ ಸಲಹಾ ಸಂಸ್ಥೆಯಾಗಿ ಅರ್ನಸ್ಟ್‌ ಆ್ಯಂಡ್‌ ಯಂಗ್‌ ನೇಮಿಸಲಾಗಿದೆ. ‘ಎಐ’ ಮಾರಾಟದ ಸರಿಯಾದ ಬೆಲೆಯನ್ನು ಸರ್ಕಾರ ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT