ಇಂಧನ ದರ ನಿಯಂತ್ರಣ: ಶೀಘ್ರ ಕ್ರಮ ನಿರೀಕ್ಷೆ

7

ಇಂಧನ ದರ ನಿಯಂತ್ರಣ: ಶೀಘ್ರ ಕ್ರಮ ನಿರೀಕ್ಷೆ

Published:
Updated:
ಇಂಧನ ದರ ನಿಯಂತ್ರಣ: ಶೀಘ್ರ ಕ್ರಮ ನಿರೀಕ್ಷೆ

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ದರಗಳು ಗರಿಷ್ಠ ಮಟ್ಟಕ್ಕೆ ಏರಿಕೆ ಕಾಣುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ವಾರದೊಳಗೇ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದರ ನಿಯಂತ್ರಣಕ್ಕೆ ಎಕ್ಸೈಸ್‌ ಸುಂಕ ಕಡಿತದ ಮಾರ್ಗವೊಂದನ್ನೇ ಅನುಸರಿಸಲಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ಸುಂಕ ಕಡಿತದ ಸಾಧ್ಯತೆಯೇ ಇಲ್ಲ ಎಂದೂ ಹೇಳುವುದಿಲ್ಲ. ಆದರೆ ಸುಂಕ ಕಡಿತ ಮಾಡುವಾಗ ವಿತ್ತೀಯ ಶಿಸ್ತನ್ನು ಗಮನದಲ್ಲಿ ಇಟ್ಟುಕೊಳ್ಳುವ ಅಗತ್ಯವೂ ಇದೆ ಎಂದು ಹೇಳಿದ್ದಾರೆ.

ದರ ಏರಿಕೆಯು ಸರ್ಕಾರವನ್ನು ಇಕ್ಕಟ್ಟಿನ ಸ್ಥಿತಿಗೆ ದೂಡಿದೆ. ಹೀಗಾಗಿ ಹಲವು ಕ್ರಮಗಳ ಮೂಲಕ ಇದನ್ನು ನಿಯಂತ್ರಿಸಬೇಕಾಗಿದೆ. ಕಚ್ಚಾ ತೈಲ ದರ ಏರಿಕೆಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯವು ಪೆಟ್ರೋಲಿಯಂ ಸಚಿವಾಲಯದ ಸಲಹೆ ಪಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry