ಸೂಪರ್‌ನೋವಾಗೆ ರೋಚಕ ಜಯ

7
ಮಹಿಳೆಯರ ಟ್ವೆಂಟಿ–20 ಪ್ರದರ್ಶನ ಪಂದ್ಯ

ಸೂಪರ್‌ನೋವಾಗೆ ರೋಚಕ ಜಯ

Published:
Updated:
ಸೂಪರ್‌ನೋವಾಗೆ ರೋಚಕ ಜಯ

ಮುಂಬೈ (ಪಿಟಿಐ): ರೋಚಕ ಪಂದ್ಯದಲ್ಲಿ ಸೂಪರ್‌ನೋವಾ ತಂಡ ಟ್ರಯಲ್‌ ಬ್ಲೇಜರ್ಸ್‌ ವಿರುದ್ಧ ಮೂರು ವಿಕೆಟ್‌ಗಳಿಂದ ಗೆದ್ದಿತು.

ಐಪಿಎಲ್‌ ಅಂಗವಾಗಿ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಿಳೆಯರ ಪ್ರದರ್ಶನ ಪಂದ್ಯ ‘ಟ್ವೆಂಟಿ–20 ಚಾಲೆಂಜ್‌’ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ನಾಯಕತ್ವದ ಟ್ರಯಲ್‌ ಬ್ಲೇಜರ್ಸ್‌ 129 ರನ್‌ ಗಳಿಸಿತ್ತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್ ನೋವಾ ತಂಡ ಅಂತಿಮ ಎಸೆತದಲ್ಲಿ ಗುರಿ ಮುಟ್ಟಿತು.

ಸಂಕ್ಷಿಪ್ತ ಸ್ಕೋರು: ಟ್ರಯಲ್‌ ಬ್ಲೇಜರ್ಸ್‌: 20 ಓವರ್‌ಗಳಲ್ಲಿ 6ಕ್ಕೆ 129 (ಸೂಜಿ ಬೇಟ್ಸ್‌ 32, ದೀಪ್ತಿ ಶರ್ಮಾ 21, ಜೆಮಿಮಾ ರಾಡ್ರಿಗಸ್‌ 25, ಮೆಗನ್ ಶೂಟ್‌ 18ಕ್ಕೆ2, ಎಲಿಸ್ ಪೆರಿ 20ಕ್ಕೆ2, ರಾಜೇಶ್ವರಿ ಗಾಯಕವಾಡ್‌ 21ಕ್ಕೆ1); ಸೂಪರ್‌ನೋವಾ: 20 ಓವರ್‌ಗಳಲ್ಲಿ 7ಕ್ಕೆ 130 (ಮಿಥಾಲಿರಾಜ್‌ 22, ಡೇನಿಯೆಲ್‌ ವೈಟ್‌ 24). ಫಲಿತಾಂಶ: ಸೂಪರ್‌ನೋವಾಗೆ ಮೂರು ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry