ಫ್ರೆಂಚ್ ಓಪನ್ ಟೆನಿಸ್‌: ಸುದೀರ್ಘ ಕಾಯುವಿಕೆಗೆ ಕೊನೆ?

7

ಫ್ರೆಂಚ್ ಓಪನ್ ಟೆನಿಸ್‌: ಸುದೀರ್ಘ ಕಾಯುವಿಕೆಗೆ ಕೊನೆ?

Published:
Updated:
ಫ್ರೆಂಚ್ ಓಪನ್ ಟೆನಿಸ್‌: ಸುದೀರ್ಘ ಕಾಯುವಿಕೆಗೆ ಕೊನೆ?

ಪ್ಯಾರಿಸ್‌ (ಎಎಫ್‌ಪಿ): ಟೆನಿಸ್ ಲೋಕದ ಧ್ರುವತಾರೆ ರಫೆಲ್ ನಡಾಲ್‌ಗೆ ಭಾರಿ ಪೈಪೋಟಿ ನೀಡುತ್ತಿರುವ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಜರ್ಮನಿಯ ಸುದೀರ್ಘ ಕಾಲದ ಕಾಯುವಿಕೆಗೆ ಅಂತ್ಯ ಹಾಡುವ ಭರವಸೆ ಮೂಡಿಸಿದ್ದಾರೆ.

ಈ ವಾರದ ಕೊನೆಯಲ್ಲಿ ಆರಂಭವಾಗಲಿರುವ ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಜ್ವೆರೆವ್‌ ಎರಡನೇ ಶ್ರೇಯಾಂಕದ ಆಟಗಾರನಾಗಿ ಕಣಕ್ಕೆ ಇಳಿಯಲಿದ್ದಾರೆ. ರೋಲ್ಯಾಂಡ್ ಗ್ಯಾರೋಸ್‌ನಲ್ಲಿ 81 ವರ್ಷಗಳಿಂದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ಜರ್ಮನಿ ಈ ಬಾರಿ ಜ್ವೆರೆವ್ ಅವರು ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದೆ.

ಕಳೆದ ಭಾನುವಾರ ಮುಕ್ತಾ ಯ ಗೊಂಡ ಇಟಾ ಲಿಯನ್ ಓಪನ್ ಟೂರ್ನಿಯ ಫೈನ ಲ್‌ನಲ್ಲಿ ಸೋಲು ವುದರೊಂದಿಗೆ ನಡಾಲ್‌ಗೆ ಜ್ವೆರೆವ್‌ ನಿರಂ ತರ ಆರನೇ ಬಾರಿ ಶರಣಾ ದಂತಾಯಿತು. ಆದರೆ ಈ ಪಂದ್ಯ ದಲ್ಲಿ ಮೊದಲ ಸೆಟ್‌ನಲ್ಲಿ 1–6 ಹಿನ್ನಡೆ ಗಳಿಸಿದ್ದ ಅವರು ನಂತರ ಕಾದಾಡಿದ ರೀತಿ ಅಪೂರ್ವ ವಾಗಿತ್ತು. ಹೀಗಾಗಿ ಅವರ ಮೇಲೆ ಭರವಸೆ ಹೆಚ್ಚಿದೆ.

ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯೊಂದರಲ್ಲಿ ಈ ವರೆಗೆ ಕ್ವಾರ್ಟರ್ ಫೈನಲ್ ಹಂತಕ್ಕೂ ತಲುಪಲಾಗದ ಜ್ವೆರೆವ್‌ ಈಗ ಈ ವರ್ಷ ಉತ್ತಮ ಆಟ ಆಡುತ್ತ ಸಾಗುತ್ತಿದ್ದಾರೆ. ಮ್ಯಾಡ್ರಿಡ್‌ ಓಪನ್‌ ಟೂರ್ನಿಯಲ್ಲಿ ಅವರು ಡೊಮಿನಿಕ್‌ ಥೀಮ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದಾರೆ. ಈಚೆಗೆ ಒಟ್ಟು 13 ಪಂದ್ಯಗಳಲ್ಲಿ ಗೆದ್ದಿದ್ದ ಅವರ ಓಟಕ್ಕೆ ಭಾನುವಾರ ನಡಾಲ್ ತೆರೆ ಎಳೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry