7

ಕೇನ್‌ ಇಂಗ್ಲೆಂಡ್‌ ತಂಡದ ನಾಯಕ

Published:
Updated:
ಕೇನ್‌ ಇಂಗ್ಲೆಂಡ್‌ ತಂಡದ ನಾಯಕ

ಲಂಡನ್‌ (ಎಎಫ್‌ಪಿ): ಮುಂದಿನ ತಿಂಗಳು ರಷ್ಯಾದಲ್ಲಿ ನಡೆಯುವ ಫುಟ್‌ಬಾಲ್‌ ವಿಶ್ವಕಪ್‌ಗೆ ಹ್ಯಾರಿ ಕೇನ್‌ ಅವರನ್ನು ಇಂಗ್ಲೆಂಡ್‌ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

‘ಹ್ಯಾರಿ ಅವರದು ಗಟ್ಟಿ ವ್ಯಕ್ತಿತ್ವ. ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಕಲೆ ಅವರಲ್ಲಿದೆ. ಅವರು ತಂಡದ ಇತರರಿಗೆ ಮಾದರಿಯಾಗುವ ಸಾಮರ್ಥ್ಯ ಹೊಂದಿರುವ ಆಟಗಾರ’ ಎಂದು ಇಂಗ್ಲೆಂಡ್‌ ತಂಡದ ಕೋಚ್‌ ಗರೆತ್‌ ಸೌಥ್‌ಗೇಟ್‌ ಹೇಳಿದ್ದಾರೆ.

ಕೋಚ್‌ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹ್ಯಾರಿ, ‘ಇಂಗ್ಲೆಂಡ್‌ ತಂಡದ ನಾಯಕನಾಗುವ ಕನಸು ನನಸಾಗುತ್ತಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸವಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry