ಪಾಕಿಸ್ತಾನದ ಶೆಲ್‌ ದಾಳಿಗೆ ಇಬ್ಬರು ನಾಗರಿಕರು ಬಲಿ

7

ಪಾಕಿಸ್ತಾನದ ಶೆಲ್‌ ದಾಳಿಗೆ ಇಬ್ಬರು ನಾಗರಿಕರು ಬಲಿ

Published:
Updated:
ಪಾಕಿಸ್ತಾನದ ಶೆಲ್‌ ದಾಳಿಗೆ ಇಬ್ಬರು ನಾಗರಿಕರು ಬಲಿ

ಕಠುವಾ: ಜಮ್ಮು ಕಾಶ್ಮೀರದ ಹಿರಾನಗರ ವಲಯದಲ್ಲಿನ ಕಠುವಾದಲ್ಲಿ ಪಾಕಿಸ್ತಾನ ಪಡೆ ನಡೆಸಿದ ಶೆಲ್ ದಾಳಿಗೆ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ.

ಸಾಂಬಾದ ರಾಮ್‌ಘರ್, ಜಮ್ಮುವಿನ ಅರ್ನಿಯಾ, ಆರ್‌ಎಸ್‌ಪುರ, ಕಠುವಾ ವಲಯದಲ್ಲಿ ಮಂಗಳವಾರ ತಡರಾತ್ರಿ ಮುಂದುವರೆದ 9ನೇ ದಿನದ ಶೆಲ್ ದಾಳಿಗೆ ಬಿಎಸ್‌ಎಫ್‌ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಹಿರಾನಗರವನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನ ಪಡೆ ಗಡಿ ಗ್ರಾಮವಾದ ಲೋಂಧಿಯಲ್ಲಿಯೂ ನಿರಂತರವಾಗಿ ಶೆಲ್ ದಾಳಿ ನಡೆಸಿದೆ. ಅಲ್ಲದೇ ಅಲ್ಲಿನ ರಾಮ್‌ಪಾಲ್‌ ಎಂಬುವರ ಮನೆ ಮೇಲೆ ನಡೆದ ದಾಳಿಯಲ್ಲಿ ಅದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರಗೊಂಡಿವೆ. ಇನ್ನು ಕೆಲವರು ಸರ್ಕಾರ ಒದಗಿಸಿದ ನಿರಾಶ್ರಿತರ ಮನೆಗಳಲ್ಲಿ ವಾಸವಾಗಿದ್ದಾರೆ. ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.

ಇನ್ನು ಆರ್‌ಎಸ್‌ಪುರದಲ್ಲಿ ಶೆಲ್ ದಾಳಿಗೆ ಮನೆಗಳು ಮತ್ತು ಕಾರುಗಳು ಹಾನಿಗೊಳಗಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry