ಸೈಕಲ್‌ ಈಗ ಕಳುವಾಗಲ್ಲ...

7

ಸೈಕಲ್‌ ಈಗ ಕಳುವಾಗಲ್ಲ...

Published:
Updated:
ಸೈಕಲ್‌ ಈಗ ಕಳುವಾಗಲ್ಲ...

ಸೈಕಲ್‌ ಬಾಡಿಗೆಗೆ ಕೊಡುವುದು ನಮ್ಮ ದೇಶದಲ್ಲಿ ಬಹು ಹಿಂದಿನಿಂದಲೇ ಪ್ರಚಲಿತದಲ್ಲಿರುವ ಪದ್ಧತಿ. ಕೆಲವು ವರ್ಷಗಳಿಂದ ಈಚೆಗೆ ಪ್ರಪಂಚದ ಪ್ರಮುಖ ನಗರಗಳಲ್ಲಿ ಸೈಕಲ್‌ ಬಾಡಿಗೆ ನೀಡುವ ಪರಿಪಾಠ ಬಹುದೊಡ್ಡ ಪ್ರಮಾಣದಲ್ಲಿ ಶುರುವಾಗಿದೆ. ಇದೊಂದು ಸುಲಭದ ವಿಧಾನವಾದರೂ ಬೃಹತ್‌ ನಗರಿಗಳಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದು ಕಷ್ಟ.

ಗಮ್ಯಸ್ಥಳ ತಲುಪಿದ ಮೇಲೆ ಹತ್ತಿರದ ಸ್ಟ್ಯಾಂಡ್‌ನಲ್ಲಿ ಸೈಕಲ್‌ ನಿಲ್ಲಿಸಿ ಹೋಗಬಹುದು. ಇಲ್ಲವೆ ಪಡೆದ ಸ್ಥಳಕ್ಕೇ ಮತ್ತೆ ತಂದು ನಿಲ್ಲಿಸಬಹುದು. ಇಂತಹ ವ್ಯವಸ್ಥೆಯನ್ನು ಅಮೆರಿಕದಲ್ಲಿ ಬಹುಹಿಂದೆಯೇ ಜಾರಿಗೆ ತರಲಾಗಿತ್ತು. ಆದರೆ, ಬಾಡಿಗೆಗೆ ನೀಡಲಾಗುತ್ತಿದ್ದ ಸೈಕಲ್‌ಗಳನ್ನು ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದಾಗ ಕಳುವು ಮಾಡುವ ಪರಿಪಾಠ ಹೆಚ್ಚಾಗಿದ್ದರಿಂದ ಬಾಡಿಗೆದಾರರು ಈ ಸೌಲಭ್ಯವನ್ನು ಬಹುಬೇಗ ನಿಲ್ಲಿಸಿಬಿಡುತ್ತಿದ್ದರು.

ತಂತ್ರಜ್ಞಾನದಿಂದ ಸೈಕಲ್‌ ಬಾಡಿಗೆ ನೀಡುವ ಪ್ರಕ್ರಿಯೆ ಈಗ ಸರಳ ಹಾಗೂ ಸುರಕ್ಷಿತ ಎನಿಸಿದ್ದು, ಈ ವ್ಯವಸ್ಥೆ ಪ್ರಪಂಚದಾದ್ಯಂತ ಮತ್ತೆ ಜನಪ್ರಿಯ ಆಗುತ್ತಿದೆ. ಚೀನಾ ಈ ಅವಕಾಶವನ್ನು ಬಾಚಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಸೈಕಲ್‌ ಬಾಡಿಗೆ ಪಡೆಯಬೇಕಾದರೆ ಸವಾರರು ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ನೋಂದಣಿ ಮಾಡಿಕೊಂಡಿರಬೇಕು.

ಸೈಕಲ್‌ ಮೇಲಿನ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಲಾಕ್‌ ತೆರೆದುಕೊಂಡು ಸೈಕಲ್‌ ಬಳಕೆಗೆ ಸಿಗುತ್ತದೆ. ಅಲ್ಲದೆ, ಅವರ ವಾಲೆಟ್‌ನಿಂದ ಬಾಡಿಗೆ ಮೊತ್ತವೂ ಕಡಿತಗೊಳ್ಳುತ್ತದೆ. ಇದರಿಂದ ಯಾವ ಸೈಕಲ್‌ಅನ್ನು ಯಾರು ಬಳಕೆ ಮಾಡಿಕೊಂಡಿದ್ದಾರೆ ಮತ್ತು ಅದೀಗ ಯಾವ ಸ್ಟ್ಯಾಂಡ್‌ನಲ್ಲಿದೆ ಎಂಬ ಮಾಹಿತಿ ಬಾಡಿಗೆದಾರರಿಗೆ ಸುಲಭವಾಗಿ ಸಿಗುತ್ತದೆ. ಹೀಗಾಗಿ ಸೈಕಲ್‌ ಕಳುವು ಪ್ರಕರಣಗಳು ಬಹುತೇಕ ನಿಂತಿವೆ. ಅಮೆರಿಕ, ಯುರೋಪ್‌, ಚೀನಾ ಮತ್ತು ಜಪಾನ್‌ ದೇಶಗಳಲ್ಲಿ ಸೈಕಲ್‌ ಬಾಡಿಗೆ ಪಡೆಯುವ ಪರಿಪಾಠ ಹೆಚ್ಚಿದ್ದು, ಈ ಪರಿಸರಸ್ನೇಹಿ ಸಾರಿಗೆಯಿಂದ ಸ್ವಲ್ಪಮಟ್ಟಿಗೆ ಮಾಲಿನ್ಯವೂ ತಗ್ಗಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry