ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಜಿಮೇಲ್ ಸ್ವರೂಪ; ಹೊಸತೇನಿದೆ?

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಜಿಮೇಲ್ ಡಿಸೈನ್ ಬದಲಾಗಿದ್ದು ಎಲ್ಲರೂ ಗಮನಿಸಿರಬಹುದು. ಜಿಮೇಲ್ ಬಳಕೆದಾರರು ಇನ್ನೂ ಹೊಸ ಡಿಸೈನ್‍ ಆಯ್ಕೆ ಮಾಡಿಕೊಂಡಿಲ್ಲ ಎಂದಾದರೆ ಜಿಮೇಲ್ ಸೆಟ್ಟಿಂಗ್ ಬಟನ್ ಕ್ಲಿಕ್ ಮಾಡಿದರೆ Try new Gmail ಎಂಬ ಆಪ್ಶನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಹೊಸ ಸ್ವರೂಪದ ಜಿಮೇಲ್‍ಗೆ ಸ್ವಿಚ್ ಆಗಬಹುದು.

ಹೊಸತೇನಿದೆ?
ಇಮೇಲ್ ಶಾರ್ಟ್ ಕಟ್ ಜಿಮೇಲ್ ಇನ್‌ಬಾಕ್ಸ್‌ನಲ್ಲಿರುವ ಸಂದೇಶಗಳ ಮೇಲೆ ಮೌಸ್ ಪಾಯಿಂಟರ್ ಇಟ್ಟರೆ ಬಲಭಾಗದಲ್ಲಿ Archive, delete, Mark as read ಮತ್ತು Snooze ಎಂಬ ಶಾರ್ಟ್ ಕಟ್ ಬಟನ್‌ಗಳು ಕಾಣುತ್ತವೆ. ಇದರಲ್ಲಿ ಮೊದಲ ಮೂರು ಆಯ್ಕೆಗಳು ಈ ಮೊದಲೇ ಜಿಮೇಲ್‍ನಲ್ಲಿ ಇದ್ದವು. ಆದರೆ Snooze ಹೊಸ ಆಪ್ಶನ್ ಆಗಿದೆ.

ಸಂದೇಶಕ್ಕೆ ಉತ್ತರ ಕಳಿಸಲೇ? ‌
Nudge feature ಸಹಾಯದಿಂದಾಗಿ ಇನ್‍ಬಾಕ್ಸ್‌ನಲ್ಲಿರುವ ಸಂದೇಶಗಳನ್ನು ಗಮನಿಸುವಂತೆ ನಿರ್ದೇಶನ ನೀಡುವ ವ್ಯವಸ್ಥೆ ಇಲ್ಲಿದೆ. ಉದಾಹರಣೆ ಮೂರು ದಿನಗಳ ಹಿಂದೆ ಬಂದಿರುವ ಇಮೇಲ್‍ ಅನ್ನು ನಾವು ಗಮನಿಸದೇ ಇದ್ದರೆ Received 3 days ago, Reply ಎಂಬ ಸಂದೇಶವೊಂದು ಕಾಣಿಸುತ್ತದೆ. ಈ ಮೂಲಕ ಇಮೇಲ್‍ಗೆ ಉತ್ತರಿಸುವಂತೆ ಜಿಮೇಲ್ ನಮ್ಮ ಗಮನ ಸೆಳೆಯುತ್ತದೆ.

ಸ್ಮಾರ್ಟ್ ಉತ್ತರ
ಇಮೇಲ್‍ಗೆ ಉತ್ತರಿಸುವಾಗ ಆ ಇಮೇಲ್‍ನಲ್ಲಿದ್ದ ವಿಷಯವನ್ನು ಗ್ರಹಿಸಿ Thank you, Yes, No, Congratulations ಮೊದಲಾದ ಸ್ಮಾರ್ಟ್ ಉತ್ತರವನ್ನು ಜಿಮೇಲ್ ಇಲ್ಲಿ ಸೂಚಿಸುತ್ತದೆ.

ಸುರಕ್ಷತೆ ಬಗ್ಗೆ ಎಚ್ಚರಿಕೆ
ಯಾವುದಾದರೂ ಇಮೇಲ್ ಅಪಾಯಕಾರಿ ಎಂದು ಅನಿಸಿದರೆ This message seems dangerous ಎಂಬ ಸಂದೇಶವನ್ನು ತೋರಿಸುವುದರ ಜತೆಗೆ ಡಿಲೀಟ್ ನೌ ಎಂಬ ಬಟನ್‍ ತೋರಿಸುತ್ತದೆ. ಈ ಮೂಲಕ ಜಿಮೇಲ್ ಸುರಕ್ಷೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ.

ನೇಟಿವ್ ಆಫ್‍ಲೈನ್ ಮೋಡ್
ಇಂಟರ್ನೆಟ್ ಸಂಪರ್ಕ ಸಾಧ್ಯವಾಗದೇ ಇರುವಾಗ ಗೂಗಲ್ ಡಾಕ್ಸ್‌ನಲ್ಲಿರುವಂತೆ ಜಿಮೇಲ್‍ನಲ್ಲಿಯೂ ನೇಟಿವ್‌ ಆಫ್‍ಲೈನ್ ಮೋಡ್ ವ್ಯವಸ್ಥೆ ಕಲ್ಪಿಸಲಾಗಿದೆ.

ಆ್ಯಪ್‌ನಲ್ಲಿಯೂ ಇದೆ ಹೊಸ ವೈಶಿಷ್ಟ್ಯ
ಪ್ರಧಾನ ಸಂದೇಶಗಳು ಯಾವುದು ಎಂದು ಪ್ರತ್ಯೇಕಿಸುವ ಪ್ರಯಾರಿಟಿ ನೋಟಿಫಿಕೇಶನ್, ನ್ಯೂಸ್ ಲೆಟರ್‌ಗಳನ್ನು ಅನ್‍ಸಬ್‍ಸ್ಕ್ರೈಬ್ ಮಾಡುವ ಶಾರ್ಟ್ ಕಟ್‌ಗಳು ಜಿಮೇಲ್ ಮೊಬೈಲ್ ಆ್ಯಪ್‍ನಲ್ಲಿಯೂ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT