ಹೆಚ್ಚಿದ ಜನಜಂಗುಳಿ: ಮೆಟ್ರೊ ನಿಲ್ದಾಣದ ಬಾಗಿಲು ಬಂದ್ ಮಾಡಿದ ಸಿಬ್ಬಂದಿ

7

ಹೆಚ್ಚಿದ ಜನಜಂಗುಳಿ: ಮೆಟ್ರೊ ನಿಲ್ದಾಣದ ಬಾಗಿಲು ಬಂದ್ ಮಾಡಿದ ಸಿಬ್ಬಂದಿ

Published:
Updated:
ಹೆಚ್ಚಿದ ಜನಜಂಗುಳಿ: ಮೆಟ್ರೊ ನಿಲ್ದಾಣದ ಬಾಗಿಲು ಬಂದ್ ಮಾಡಿದ ಸಿಬ್ಬಂದಿ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಮೆಟ್ರೊದ ‘ಡಾ.ಬಿಆರ್‌. ಅಂಬೇಡ್ಕರ್ ನಿಲ್ದಾಣ ವಿಧಾನಸೌಧ’ದಲ್ಲಿ ಜನಜಂಗುಳಿ ಹೆಚ್ಚಾಗಿದೆ.

ಇದರಿಂದ ದಿಕ್ಕುತೋಚದ ಸಿಬ್ಬಂದಿ ಮೆಟ್ರೊ ನಿಲ್ದಾಣದ ಬಾಗಿಲು ಬಂದ್ ಮಾಡಿದ್ದಾರೆ. ನಿಲ್ದಾಣದ ಹೊರಗೆ ಜನ ಸಾಲುಗಟ್ಟಿ ಸಾಲುಗಟ್ಟಿ ನಿಂತಿದ್ದಾರೆ.

ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿರುವುದರಿಂದಲೇ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸಮಾರಂಭದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಬುಧವಾರ ಮಧ್ಯಾಹ್ನ ಸಂಚಾರ ದಟ್ಟಣೆ ಉಂಟಾಗಿತ್ತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಶಾಸಕರೂ ಸಂಚಾರದಟ್ಟಣೆಯಲ್ಲಿ ಸಿಲುಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry