ಭಾವೇಶ್‌ ಜೋಷಿ... ಬಿಡುಗಡೆ ಮುಂದಕ್ಕೆ!

7

ಭಾವೇಶ್‌ ಜೋಷಿ... ಬಿಡುಗಡೆ ಮುಂದಕ್ಕೆ!

Published:
Updated:
ಭಾವೇಶ್‌ ಜೋಷಿ... ಬಿಡುಗಡೆ ಮುಂದಕ್ಕೆ!

‘ಭಾವೇಶ್‌ ಜೋಷಿ ಸೂಪರ್‌ ಹೀರೊ’ ಚಿತ್ರ ಬಿಡುಗಡೆಯನ್ನು ಮೇ 27ರಿಂದ ಜೂನ್‌ 1ಕ್ಕೆ ಮುಂದೂಡಲಾಗಿದೆ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಹರ್ಷವರ್ಧನ್‌ ಕಪೂರ್‌. ಅನಿಲ್‌ ಕಪೂರ್‌ ಕುಟುಂಬದ ಇನ್ನೊಂದು ಕುಡಿ ಸೂಪರ್‌ ಹೀರೊ ಆಗಿಯೇ ಚಲನಚಿತ್ರ ರಂಗಕ್ಕೆ ಕಾಲಿರಿಸಲಿದೆ. ಬೋನಿ ಕಪೂರ್ ಮಗ ಅರ್ಜುನ್‌ ಕಪೂರ್‌ ಈಗಾಗಲೇ ಬಾಲಿವುಡ್‌ನಲ್ಲಿ ತಮ್ಮದೇ ಗುರುತನ್ನು ಮೂಡಿಸಿದ್ದಾರೆ. ಸೋನಂ ಕಪೂರ್‌ ಸಹ.

2018ರಲ್ಲಿ ಸೋನಂ ಕಪೂರ್‌ ಮದುವೆಯಷ್ಟೇ ಪ್ರಾಮುಖ್ಯ ಪಡೆದಿರುವುದು ಹರ್ಷವರ್ಧನ್‌ ಅವರ ಈ ಚಿತ್ರ ತೆರೆಕಾಣುವುದಕ್ಕೆ. ರಿಯಾ ಕಪೂರ್‌ ನಿರ್ಮಾಣದ (ಇವರೂ ಅನಿಲ್‌ ಕಪೂರ್ ಮಗಳು, ಹರ್ಷವರ್ಧನ್‌, ಸೋನಂ ಸಹೋದರಿ) ಈ ಚಿತ್ರವನ್ನು ಮುಂದೂಡಲು ಕಾರಣ ‘ವೀರ್‌ ದೆ ವೆಡ್ಡಿಂಗ್‌’ ಚಿತ್ರದ ಬಿಡುಗಡೆಯೂ ಕಾರಣವಾಗಿರಬಹುದು. ಆದರೆ ಇದನ್ನು ಹರ್ಷವರ್ಧನ್‌ ಅಲ್ಲಗಳೆದಿದ್ದಾರೆ. ಕಪೂರ್‌ ಮನೆತನಕ್ಕೆ ಎರಡೆರಡು ಸಿನಿಮಾ ಬಿಡುಗಡೆಗಳನ್ನು ಒಂದೇ ಶುಕ್ರವಾರ ಎದುರಿಸಲಾಗದು ಎಂದೇನಿಲ್ಲ.

ಸೋನಂ ಮತ್ತು ಅನಿಲ್‌ ಅಹುಜಾ ಮದುವೆಯೂ ಮುಂದೂಡಿಕೆಗೆ ಕಾರಣವಾಗಿದೆ. ಇಷ್ಟಕ್ಕೂ ‘ವೀರ್‌ ದೆ ವೆಡ್ಡಿಂಗ್‌’ ಚಿತ್ರಕ್ಕೆ ಇನ್ನೂ ಸೆನ್ಸಾರ್‌ ಬೋರ್ಡ್‌ನಿಂದ ಸರ್ಟಿಫಿಕೇಟ್‌ ಸಹ ಸಿಕ್ಕಿಲ್ಲ. ಏಕ್ತಾ ಕಪೂರ್‌ ಸದ್ಯಕ್ಕೆ ಈ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದಿದ್ದಾರೆ. ರಿಯಾ ಮತ್ತು ಏಕ್ತಾ ಕಪೂರ್‌ ಸೆನ್ಸಾರ್‌ ಬೋರ್ಡ್‌ಗೆ ಎಡತಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry