ಪ್ರತಿ ಲೀಟರ್‌ ಪೆಟ್ರೋಲ್‌ ದರವನ್ನು ₹ 25 ಇಳಿಸಲು ಸಾಧ್ಯವಿದೆ: ಚಿದಂಬರಂ

7

ಪ್ರತಿ ಲೀಟರ್‌ ಪೆಟ್ರೋಲ್‌ ದರವನ್ನು ₹ 25 ಇಳಿಸಲು ಸಾಧ್ಯವಿದೆ: ಚಿದಂಬರಂ

Published:
Updated:
ಪ್ರತಿ ಲೀಟರ್‌ ಪೆಟ್ರೋಲ್‌ ದರವನ್ನು ₹ 25 ಇಳಿಸಲು ಸಾಧ್ಯವಿದೆ: ಚಿದಂಬರಂ

ನವದೆಹಲಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಹಣಕಾಸು ಖಾತೆ ಮಾಜಿ ಸಚಿವ ಪಿ. ಚಿದಂಬರಂ ಅವರು ಪೆಟ್ರೋಲ್‌ ದರ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಪ್ರತಿ ಲೀಟರ್‌ ಬೆಲೆಯನ್ನು ₹ 25ರಷ್ಟು ಕಡಿಮೆ ಮಾಡಬಹುದು. ಆದರೆ, ಸರ್ಕಾರ ಮಾಡುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

‘ಪೆಟ್ರೋಲ್‌ ಬೆಲೆಯನ್ನು ಪ್ರತಿ ಲೀ.ಗೆ ₹25ರ ವರೆಗೆ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಸರ್ಕಾರ ಅದನ್ನು ಮಾಡುವುದಿಲ್ಲ. ₹ 1 ಅಥವಾ ₹ 2ರಂತೆ ಪ್ರತಿ ಲೀ. ದರ ಇಳಿಸಿ ಜನರಿಗೆ ಮೋಸ ಮಾಡಲಿದೆ’ ಎಂದು ಟ್ವೀಟ್‌ ಮೂಲಕ ದೂರಿದ್ದಾರೆ.

ದೇಶದ ನಾಲ್ಕು ಮಹಾನಗರಗಳಲ್ಲಿ ಮಂಗಳವಾರ ಪ್ರತಿ ಲೀ. ಪೆಟ್ರೋಲ್‌ ಬೆಲೆ 30 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ₹76.57ರಿಂದ ₹76.87 ಕ್ಕೆ ಏರಿಕೆಯಾಗಿದ್ದರೆ, ಮುಂಬೈನಲ್ಲಿ ₹84.40ಯಿಂದ ₹87.70ಗೆ ಏರಿಕೆಯಾಗಿದೆ.

‘ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ ₹25 ಸರ್ಕಾರದ ಆದಾಯವನ್ನು ಹೆಚ್ಚಿಸಿದೆ. ಈ ಹಣವು ಸಾಮಾನ್ಯ ಗ್ರಾಹಕರಿಗೆ ಅರ್ಹವಾಗಿ ಸೇರಬೇಕಾದದ್ದಾಗಿದೆ’ ಎಂದು ಟ್ವೀಟಿಸಿದ್ದಾರೆ.

ಕಚ್ಚಾ ತೈಲದಿಂದ ಬೆಲೆ ಇಳಿಕೆಯಿಂದ ಪ್ರತಿ ಲೀ. ಪೆಟ್ರೋಲ್‌ ದರದಲ್ಲಿ ಕೇಂದ್ರ ಸರ್ಕಾರ ₹15ರಷ್ಟನ್ನು ಉಳಿತಾಯ ಮಾಡುತ್ತಿದೆ. ಜೊತೆಗೆ ಪೆಟ್ರೋಲ್‌ ಮೇಲೆ ಹೆಚ್ಚುವರಿಯಾಗಿ ₹10 ತೆರಿಗೆ ವಿಧಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.

**

Govt can cut petrol prices by up to Rs 25 a litre, but will not: Chidambaram

Congress leader and former union finance minister P. Chidambaram on Wednesday criticised the Centre for the fuel price hike and claimed that petrol prices can be reduced by Rs 25 per litre, but the government is not doing it.

“It is possible to cut up to Rs 25 per litre, but the government will not. They will cheat the people by cutting price by Re 1 or Rs 2 per litre of petrol,” Chidambaran said in a tweet.

Across the four metropolitan cities, prices rose around 30 paise on Tuesday. In Delhi and Mumbai, the fuel was sold at Rs 76.87 and Rs 84.70 per litre, up from Rs Rs 76.57 and Rs 84.40 respectively on Monday.

“Bonanza to central government is Rs 25 on every litre of petrol. This money rightfully belongs to the average consumer”, tweeted the former finance minister.

“Central government saves Rs 15 on every litre of petrol due to fall in crude oil prices. It also puts additional tax of Rs 10 on every litre of petrol,” he added.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry