‘ಡಿಸಿಎಂ ಸ್ಥಾನ ನೀಡಿ’

7
ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡದಿದ್ದಲ್ಲಿ ಸಮಸ್ಯೆ ಖಂಡಿತ: ರಂಭಾಪುರಿ ಶ್ರೀ ಎಚ್ಚರಿಕೆ

‘ಡಿಸಿಎಂ ಸ್ಥಾನ ನೀಡಿ’

Published:
Updated:

ಬೈಲಹೊಂಗಲ: ಶಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬುಧವಾರ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೀರಶೈವ ಲಿಂಗಾಯತರಿಗೆ ಒಳ್ಳೆಯ ಹುದ್ದೆಗಳನ್ನು ಕಲ್ಪಿಸಬೇಕು. ಕನಿಷ್ಠ ಆರು ಶಾಸಕರಿಗಾದರೂ ಸಚಿವ ಸ್ಥಾನ ನೀಡಬೇಕು. ಹೀಗೆ ಮಾಡುವುದರೊಂದಿಗೆ, ಧರ್ಮ ಒಡೆಯುವ ಕಳಂಕದಿಂದ ಕಾಂಗ್ರೆಸ್ ಹೊರಬರಬೇಕು’ ಎಂದರು.

‘ಒಂದು ವೇಳೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡದೇ ಇದ್ದಲ್ಲಿ, ಈ ಸರ್ಕಾರ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry